31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

ಬೆಳ್ತಂಗಡಿ: ಲಾಯಿಲದ ದಯಾ ವಿಶೇಷ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶೇಷ ಮಕ್ಕಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಸಂಚಾಲಕರು ಹಾಗೂ ನಿರ್ದೇಶಕರಾದ ವಂ. ಫಾದರ್ ವಿನೋದ್ ಮಸ್ಕರೇನ್ಹಸ್ ರವರು, ಶಾಲಾ ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ , ಮಕ್ಕಳ ಪ್ರತಿನಿಧಿಗಳಾಗಿ ಗಾಂಧೀಜಿಯವರ ವೇಷವನ್ನು ಧರಿಸಿ ಶಾಲಾ ವಿದ್ಯಾರ್ಥಿಗಳಾದ ಅವಿನಾಶ್, ಶಮೀಹ್ ಹಾಗೂ ಅಭಿನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ನಿರ್ದೇಶಕರು ವಂ.ಫಾ.ವಿನೋದ್ ಮಸ್ಕರೇನ್ಹಸ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮಹಾತ್ಮ ಗಾಂಧೀಜಿಯವರ ಸರಳ ಜೀವನ ಶೈಲಿ, ಸತ್ಯ, ಅಹಿಂಸೆ, ಶಿಸ್ತು, ಸ್ವಚ್ಛತೆ ಹಾಗೂ ದೇಶ ಪ್ರೇಮದ ಕುರಿತು ಮಕ್ಕಳಿಗೆ ತಿಳಿಸಿದರು. ಗಾಂಧೀಜಿಯವರು ಸರಳವಾದ ಉಡುಗೆ, ಸರಳ ಆಹಾರ ಮತ್ತು ಸರಳ ಜೀವನವನ್ನು ಅನುಸರಿಸುತ್ತಾ, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ವಿವರಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿ, ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಹಾಗೂ ಭಾರತ ಬಿಟ್ಟು ತೊಲಗಿ ಚಳುವಳಿಯಂತಹ ಹೋರಾಟಗಳ ಮೂಲಕ ದೇಶದ ಸ್ವಾತಂತ್ರ್ಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದರು. ದೇಶದ ಜನರಲ್ಲಿ ಏಕತೆ, ಸ್ವಾಭಿಮಾನ, ಸ್ವಾವಲಂಬನೆ ಹಾಗೂ ದೇಶ ಪ್ರೇಮದ ಭಾವನೆಯನ್ನು ಬೆಳೆಸಿದರು. ಗಾಂಧೀಜಿಯವರ ಜೀವನವು ಪ್ರತಿಯೊಬ್ಬರಿಗೂ ಸತ್ಯವನ್ನು ಪಾಲಿಸುವ, ಇತರರನ್ನು ಗೌರವಿಸುವ, ಸ್ವಚ್ಛತೆಯನ್ನು ಕಾಪಾಡುವ ಮತ್ತು ಯಾವುದೇ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸುವ ಸಂದೇಶವನ್ನು ನಮಗೆ ನೀಡುತ್ತದೆ. ವಿಶೇಷ ಮಕ್ಕಳು ಕೂಡ ಗಾಂಧೀಜಿಯವರ ಉತ್ತಮ ಗುಣಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಕ್ಕಳಿಗೆ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳ ಕುರಿತು ಸರಳವಾಗಿ ತಿಳಿಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯಾದ ಕು.ಜಯಮಣಿಯವರು ನಿರೂಪಿಸಿ ಧನ್ಯವಾದವಿತ್ತರು.

Related posts

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರವರಿಗೆ ‘ಆಯುಷ್ ರತ್ನ ಪ್ರಶಸ್ತಿ’ ಪುರಸ್ಕಾರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಬೈಂದೂರು ಉತ್ಸವ: ಸೇವಾಭಾರತಿ ತಂಡ ಭಾಗಿ

Suddi Udaya

ಕೇರಳ ವಿಧಾನಸಭಾ ಚುನಾವಣೆ: ಪ್ರಭಾರಿಯಾಗಿ ಶಾಸಕ ಹರೀಶ್ ಪೂಂಜ ನೇಮಕ

Suddi Udaya

ಪಿಲ್ಯ: ಬಾವಿಗೆ ಬಿದ್ದು ಕಾರ್ಮಿಕ ಸಾವು

Suddi Udaya

ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ: ಗಡಿಪಾರು ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ

Suddi Udaya
error: Content is protected !!