25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ತುಳುಲಿಪಿ ಕಿಬೋರ್ಡ್ ಬಿಡುಗಡೆ

ಬೆಳ್ತಂಗಡಿ: ಕರಾವಳಿ ಕರ್ನಾಟಕದ ಜಾನಪದ ಭಾಷೆಯಾದ ತುಳುವನ್ನು ಡಿಜಿಟಲ್ ಲೋಕದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಂಡ್ರಾಯ್ಡ್ ಸ್ಮಾಟ್ ಫೋನ್ ಬಳಕೆದಾರರಿಗಾಗಿ ತುಳು ಲಿಪಿಯಲ್ಲೇ ನೇರವಾಗಿ ಟೈಪ್ ಮಾಡಬಹುದಾದ ನೂತನ ಕೀಬೋರ್ಡ್ ಬಿಡುಗಡೆಯಾಗಿದೆ.

ತಂತ್ರಾಂಶ ಅಭಿವೃದ್ಧಿಪಡಿಸುವ ಸಾಫ್ಟ್ ವೇರ್ ಡೆವಲಪರ್‌ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರ ಪೂಜಾರಿ ಅವರು ಈ ‘ಕುರಲ್ ತುಳು ಟಚ್’ ಕೀಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಇದನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.

ಈ ಕೀಬೋರ್ಡ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ‘ಬರವು ಸರವು’ ಆಪ್ ಮೂಲಕ ಲಭ್ಯವಿದೆ. ಆಪ್‌ನಲ್ಲಿನ ‘ನ್ಯೂ ಕೀಬೋರ್ಡ್’ ಆಯ್ಕೆಯನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ವಾಟ್ಸಾಪ್ ಸೇರಿದಂತೆ ವಿವಿಧ ಆಪ್‌ಗಳಲ್ಲಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಕಳುಹಿಸಬಹುದು. ಜೊತೆಗೆ ತುಳು ಮತ್ತು ಇತರೆ ಕೀಬೋರ್ಡ್ಗಳ ನಡುವೆ ಬದಲಾಯಿಸಲು ಹಾಗೂ ಟೈಪ್ ಮಾಡಿದ ಪಠ್ಯವನ್ನು ಡಿಜಿಟಲ್ ಚಾಟ್‌ಗಾಗಿ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಿ ಹಂಚಿಕೊಳ್ಳಲು ಸಹ ಇದು ನೆರವಾಗುತ್ತದೆ.

ದೈನಂದಿನ ಸಂವಹನದಲ್ಲಿ ತುಳು ಲಿಪಿ ಸಾಮಾನ್ಯ ಮೊಬೈಲ್ ಕೀಬೋರ್ಡ್ ವಿನ್ಯಾಸದಲ್ಲೇ ರೂಪುಗೊಂಡಿರುವ ‘ಕುರಲ್ ತುಳು ಟಚ್’, ತುಳು ಲಿಪಿಯಲ್ಲಿ ಟೈಪಿಂಗ್ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಇದು ತುಳು ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರ ಹಾಗೂ ಒತ್ತಕ್ಷರಗಳನ್ನು ಬೆಂಬಲಿಸುವುದರಿAದ ಬಳಕೆದಾರರು ನಿಖರವಾಗಿ ಪದ ಸಂಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ.

Related posts

ಸೌತಡ್ಕ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ ಕ್ಷೇತ್ರದ ಎಲ್ಲಾ ಅರ್ಚಕ ವೃಂದ ಹಾಗೂ ಸಿಬ್ಬಂದಿಗಳಿಗೆ ಗೌರವಾರ್ಪಣೆ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಗೆ “ಅತ್ಯುತ್ತಮ ಎನ್‌.ಜಿ.ಒ” ಪ್ರಶಸ್ತಿ

Suddi Udaya

ಉಜಿರೆ: ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya

ಧರ್ಮಸ್ಥಳ: ಶ್ರೀ. ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

36ನೇ ಮಹಿಳಾ ವಿಭಾಗದ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಕರ್ನಾಟಕ ತಂಡಕ್ಕೆ ತೃತೀಯ ಸ್ಥಾನ ಎಸ್ ಡಿ ಎಂ ಕಾಲೇಜಿನ 2 ವಿದ್ಯಾರ್ಥಿನಿಯರ ಸಾಧನೆ

Suddi Udaya

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಏಟು: ಚಿಕಿತ್ಸೆ ಫಲಕಾರಿಯಾಗದೆ ಚಾರ್ಮಾಡಿ ಶಾಲಾ ಶಿಕ್ಷಕಿ ಸುಪ್ರಭಾ ಮೃತ್ಯು

Suddi Udaya
error: Content is protected !!