24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವನ್ಯಜೀವಿ ಸಪ್ತಾಹ: ಗುರುದೇವ ಕಾಲೇಜಿನ ವಿದ್ಯಾರ್ಥಿಗಳಿಂದ ಪಕ್ಷಿ, ಚಿಟ್ಟೆ ವೀಕ್ಷಣೆ

ಬೆಳ್ತಂಗಡಿ: 72 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಳ್ತಂಗಡಿ ವನ್ಯಜೀವಿ ವಲಯದ ವತಿಯಿಂದ ಗುರುದೇವ ಕಾಲೇಜಿನ ವಿದ್ಯಾರ್ಥಿಗಳಿಗೆ ಗುಂಡಲಪಾದೆ ಹಾಗೂ ನಾವೂರು ಪರಿಸರದಲ್ಲಿ ಪಕ್ಷಿ ಮತ್ತು ಚಿಟ್ಟೆ ವೀಕ್ಷಣಾ ಕಾರ್ಯಕ್ರಮ ಅ.4 ರಂದು ನಡೆಯಿತು.

ಗುಂಡಲಪಾದೆ ಹಾಗೂ ನಾವೂರು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದ ವೀಕ್ಷಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅರಣ್ಯದ ನೈಸರ್ಗಿಕ ಪರಿಸರವನ್ನು ಹತ್ತಿರದಿಂದ ವೀಕ್ಷಿಸುವುದರ ಜತೆಗೆ ವಿವಿಧ ಜಾತಿಯ ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಗುರುತಿಸುವ ಕುರಿತು ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು. ಅರಣ್ಯದಲ್ಲಿನ ಸಸ್ಯ, ಪಕ್ಷಿ, ಚಿಟ್ಟೆ ಸೇರಿದಂತೆ ವಿವಿಧ ಜೀವ ಸಂಕುಲಗಳ ಪರಸ್ಪರ ಅವಲಂಬನೆ ಹಾಗೂ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ, ಜೀವವೈವಿಧ್ಯ ರಕ್ಷಣೆ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರತಿಯೊಂದು ಜೀವಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಚಿಟ್ಟೆಗಳು ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜತೆಗೆ ಪರಿಸರದ ಆರೋಗ್ಯದ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಅದೇ ರೀತಿ ಪಕ್ಷಿಗಳು ಅರಣ್ಯದ ಆಹಾರ ಸರಪಳಿ ಹಾಗೂ ಬೀಜ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಅಧಿಕಾರಿ ಶರ್ಮಿಷ್ಠಾ ಅವರು ವನ್ಯಜೀವಿ ಸಪ್ತಾಹದ ಉದ್ದೇಶ ಹಾಗೂ ವನ್ಯಜೀವಿ ಸಂರಕ್ಷಣೆಯ ಅಗತ್ಯದ ಕುರಿತು ಮಾಹಿತಿ ನೀಡಿದರು. ಅರಣ್ಯ ಪ್ರದೇಶದಲ್ಲಿರುವ ವಿವಿಧ ಜೀವ ಸಂಕುಲಗಳನ್ನು ಗುರುತಿಸುವುದು, ಅವುಗಳ ಆವಾಸಸ್ಥಾನವನ್ನು ಸಂರಕ್ಷಿಸುವುದು ಮತ್ತು ಯುವಜನರಲ್ಲಿ ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಆಸಕ್ತಿ ಬೆಳೆಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದರು.

ಅರಣ್ಯವನ್ನು ಕೇವಲ ಮರಗಳ ಸಮೂಹವಾಗಿ ನೋಡದೆ, ಅನೇಕ ಜೀವಿಗಳ ಆಶ್ರಯ ತಾಣವಾಗಿ ಪರಿಗಣಿಸಬೇಕು. ಅರಣ್ಯ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಅವರು ತಿಳಿಸಿದರು.

ಗುರುದೇವ ಕಾಲೇಜಿನ ಪ್ರಾಂಶುಪಾಲ ಸಮೀರುಲ್ಲಾ ಅವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ರವೀಂದ್ರ, ಅರಣ್ಯ ರಕ್ಷಕರಾದ ಹೇಮಂತ್, ಭರತ್, ವಾಚರ್ ಯಶ್ವಿತಾ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Related posts

ಬೆಂಗಳೂರಿನ ಪ್ರಸಿದ್ದ ಕೈಗಾರಿಕೋದ್ಯಮಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಅಂತರರಾಷ್ಟ್ರೀಯ ಆರ್ಯಭಟ- 2024 ಪ್ರಶಸ್ತಿಗೆ ಆಯ್ಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‍ನಿಂದ ಸಿಹಿತಿಂಡಿ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ನೇಮಕ

Suddi Udaya

ಮಡಂತ್ಯಾರು: ಹೊಂಡಗಳಿಂದ ಹದಗೆಟ್ಟ ರಸ್ತೆ: ಬಿಎಂಎಸ್ ರಿಕ್ಷಾ ಚಾಲಕರಿಂದ ಹೊಂಡ ಮುಚ್ಚುವ ಕಾರ್ಯ

Suddi Udaya

ಧರ್ಮಸ್ಥಳ: ನೇತ್ರಾವತಿ ನದಿ ತೀರದಲ್ಲಿ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷರಾಗಿ ರಾಜಶ್ರೀ ಡಿ. ರಾವ್, ಕಾರ್ಯದರ್ಶಿಯಾಗಿ ಅರ್ಪಣಾ ವಾಟ್ವೆ ಆಯ್ಕೆ

Suddi Udaya
error: Content is protected !!