September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು: ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಮೀನು ಮೇಳ

ಮೊಗ್ರು : ಒಬ್ಬ ಕೃಷಿಕ ಹೇಗೆ ಲಾಭದಾಯಕವಾಗಿ ಹಾಗೂ ಪ್ರೇರಣದಾಯಿಯಾಗಿ ಕೃಷಿ ಮಾಡಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾರವರು ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಜು.16 ಮತ್ತು 17 ರಂದು ನಡೆದ ಮೀನು ಮೇಳಕ್ಕೆ ಆಗಮಿಸಿ ಮಾತನಾಡಿದರು.

ಈ ಮೇಳವನ್ನು ಈ ರಾಜ್ಯದ ದೇಶದ ಜನರು ವೀಕ್ಷಿಸಿದರೆ ಎಲ್ಲರಿಗೂ ಇದೊಂದು ಮಾದರಿ ಹಾಗೂ ಬದುಕಿಗೆ ಶಕ್ತಿಯಾಗುತ್ತದೆ, ಕಡಮ್ಮಾಜೆ ಫಾರ್ಮ್ಸ್ ಕೃಷಿಕರಿಗೆ ಹಾಗೂ ಯುವಕರಿಗೆ ಪ್ರೇರಣೆಯಾಗಿದೆ ಎಂದರು.


ಕಡಮ್ಮಾಜೆ ಮಾಲಕರಾದ ದೇವಿಪ್ರಸಾದ್ ಮತ್ತು ಜಯಪ್ರಸಾದ್ ಅವರ ಮನೆಯಲ್ಲಿ ಎರಡು ದಿನಗಳ ಮೀನುಮೇಳ ನಡೆಯಿತು. ಮೇಳದಲ್ಲಿ ಬಗೆ ಬಗೆಯ ಸಿಹಿ ಮೀನುಗಳಾದ ಮಡೆಂಜಿ ಮೀನು, ತಿಲಾಪಿಯಾ ಮೀನು, ಪಂಗಾಸಿಯಸ್ ಮೀನು ಮತ್ತು ವಿವಿಧ ರೀತಿಯ ಪಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದರು. ಮೀನು ಮೇಳಕ್ಕೆ ಆಗಮಿಸಿದ ಜನರು ತಮಗೆ ಬೇಕಾದ ಮೀನನ್ನು ಖರೀದಿಸುವ ಮೂಲಕ ಉತ್ತಮ ಅವಕಾಶವನ್ನು ಬಳಸಿಕೊಂಡರು.

Related posts

ಕಾವು–ಕೌಕ್ರಾಡಿ ತ್ರಿಗುಣಾತ್ಮಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ರೂ.8 ಲಕ್ಷ ವೆಚ್ಚದ ಮಹಾದ್ವಾರ ಉದ್ಘಾಟನೆ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘ ಹಾಗೂ ದಿ. ಹೊನ್ನಪ್ಪ ಗೌಡರ ಅಭಿಮಾನಿ ಬಳಗದಿಂದ ಯಕ್ಷಗಾನ ತಾಳಮದ್ದಳೆ ಮತ್ತು ನುಡಿ ನಮನ ಕಾರ್ಯಕ್ರಮ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿಗಳ ವಾರ್ಷಿಕ ಸಮ್ಮೇಳನ ಉದ್ಘಾಟನೆ

Suddi Udaya

ಬಳಂಜ: ಶ್ರೀಗುರುಪೂಜೆ ಪ್ರಯುಕ್ತ ಬಿಲ್ಲವ ಸಂಘದಿಂದ ಕ್ರೀಡಾಕೂಟ

Suddi Udaya

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

Suddi Udaya

ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಅನಿತಾ ಕುಮಾರಿ ಎ, ಉಪಾಧ್ಯಕ್ಷರಾಗಿ ಪೂರ್ಣಾಕ್ಷ ಬಿ ಆಯ್ಕೆ

Suddi Udaya
error: Content is protected !!