24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ ಸಂಸ್ಥೆಗೆ ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಭೇಟಿ

ಬೆಳ್ತಂಗಡಿ ತಾಲೂಕಿನ ಅತಿ ಹಿರಿಯ ಮತ್ತು ವಿಶಾಲವಾದ ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ಮಳಿಗೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಭೇಟಿ ನೀಡಿ ಸಂಸ್ಥೆಯ ಪ್ರಾಮಾಣಿಕ ಸೇವೆ ಮತ್ತು ಬದ್ಧತೆಯ ಕಂಡು ಹರ್ಷ ವ್ಯಕ್ತಪಡಿಸಿದರು. ಸೋಜಾ ಸಂಸ್ಥೆಯ ಮಾಲಕ ಅಲ್ಫಾನ್ಸೋ ಫ್ರಾಂಕೋ ಗುಲಾಬಿ ಹೂ ನೀಡಿ ಅವರನ್ನು ಸ್ವಾಗತಿಸಿದರು.

ಬಳಿಕ ಸಂಸ್ಥೆಯ ಸಿಬ್ಬಂದಿಗಳ ಜೊತೆ ಮಾತನಾಡಿದ ರಿಯಾಜ್ ಅವರು ಸೋಜಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಕಳೆದ 31 ವರ್ಷಗಳಿಂದ ತಾಲೂಕಿನ ಜನರ ಮನಸ್ಸು ಗೆದ್ದಿದೆಯಂತಾದರೆ ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ,ಬದ್ಧತೆ,ಪ್ರಾಮಾಣಿಕತೆ ಹಾಗೂ ಮಾಲಕರ ಮೇಲಿನ ನಂಬಿಕೆ, ಪ್ರೀತಿಯಿಂದಾಗಿದೆ.

ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ, ಸತ್ಯ, ಹಾಗೂ ಮಾತುಗಾರಿಕೆ ಇವು ಮೂರು ಇದ್ದರೆ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಸಿಬ್ಬಂದಿಗಳಿಗೆ ಹಾರೈಸಿ, ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜಾ ರವರು ಹಾಗೂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳೊಂದಿಗೆ ಸೇರಿ ಹಾರ ಹಾಕಿ, ಪೇಟ ಧರಿಸಿ ಸನ್ಮಾನಿಸಿದರು. ಸಂಸ್ಥೆಯ ಪಿ. ಆರ್. ಒ ಗಳಾದ ಅಮೀನಾ ಬೀ ಶಬಾನ ರವರು ಸ್ವಾಗತಿಸಿ, ಅಬ್ದುಲ್ ಖಾದರ್ ವಂದಿಸಿದರು.

Related posts

ಮದ್ದಡ್ಕ ಎಸ್ ಕೆ ಎಸ್ ಎಸ್ ಎಫ್ ವಾರ್ಷಿಕ ಮಹಾಸಭೆ , ಸಮಿತಿ ರಚನೆ

Suddi Udaya

ಕಲ್ಮಂಜ ಲಕ್ಷ್ಮಣ ಭಂಡಾರಿ ನಿಧನ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗಂಡಿಬಾಗಿಲು ಸಿಯೋನ್ ಅಶ್ರಮಕ್ಕೆ ಭೇಟಿ

Suddi Udaya

ಕೊಕ್ಕಡ ಜೆಸಿಐ ಕಪಿಲ ಘಟಕ ಹಾಗೂ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ಕಡಬ ಆಶ್ರಯದಲ್ಲಿ “ಆರೋಗ್ಯ ಅರಿವು ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸoಪನ್ನ

Suddi Udaya

ಇಂದಬೆಟ್ಟು: ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ದಿ ಕಾಡುಪ್ರಾಣಿ

Suddi Udaya
error: Content is protected !!