25.6 C
ಪುತ್ತೂರು, ಬೆಳ್ತಂಗಡಿ
October 7, 2026
ಅಪರಾಧ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಅಲ್ಪಸಂಖ್ಯಾತರನ್ನು ಗುರಿಯಾಗಿಸಿ Form No. 7 ಆಕ್ಷೇಪಣೆ ಆರೋಪ: ಪೆರಾಡಿ ಗ್ರಾಮದ ಸಂತ್ರಸ್ತರಿಂದ ವೇಣೂರು ಠಾಣೆಗೆ ದೂರು

ವೇಣೂರು: ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು, ಸುಳ್ಳು ಹಾಗೂ ತಪ್ಪು ಮಾಹಿತಿಯ ಆಧಾರದ ಮೇಲೆ Form No. 7 ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕು ಪೆರಾಡಿ ಗ್ರಾಮದ ಸಂತ್ರಸ್ತರು SDPI ನಿಯೋಗದೊಂದಿಗೆ ವೇಣೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಮ್ಮ ಹೆಸರು ಹಾಗೂ ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ತಪ್ಪು ಮಾಹಿತಿಯ ಆಧಾರದ ಮೇಲೆ Form No. 7 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಸ್ಥಳ ಪರಿಶೀಲನೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಬೇಕು. ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ಆಕ್ಷೇಪಣೆ ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟಲ್ಲಿ, ಸಂಬಂಧಪಟ್ಟವರ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ಸಂತ್ರಸ್ತರಾದ ರಮೀಜ ಮಹಮ್ಮದ್ ಶೇಖ್, ಫೈರೋಝ್ ಮೊಹಮ್ಮದ್ ಶೇಖ್, ಟಿ. ಮಹಮ್ಮದ್, ರಝಾಕ್ ಪೆರಾಡಿ ಹಾಗೂ ಫಾರೀಸ್ ಪೆರಾಡಿ ಅವರು ದೂರು ಸಲ್ಲಿಸಿದ್ದು, ಮತದಾರರ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ SDPI ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯ ಮುಸ್ತಫಾ ಜಿ.ಕೆ., ಬಳಂಜಾ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯ ನಿಜಾಮ್ ಕಟ್ಟೆ, ಕುವೆಟ್ಟು ಬ್ಲಾಕ್ ಸಮಿತಿ ಸದಸ್ಯ ಜುನೈದ್ ಪಡ್ಡಂದಡ್ಕ, ರಫೀಕ್ ಕನ್ನಡಿಕಟ್ಟೆ, ರಫೀಕ್ ಪಡ್ಡಂದಡ್ಕ ಹಾಗೂ ಝೈನುದ್ದೀನ್ ಪೆರಾಡಿ ಉಪಸ್ಥಿತರಿದ್ದರು.

Related posts

ಮರೋಡಿ: ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya

ನಿಡ್ಲೆಯ ಪ್ರತಿಷ್ಠಿತ ಸಂಸ್ಥೆ ಅಗ್ರಿಲೀಫ್ ಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

Suddi Udaya

ತಾಮ್ರ ಶಿಲ್ಪಿ ಉಜಿರೆ ಶ್ರೀಧರ ಮಡಿವಾಳ ಹಾಗೂ ನಡ್ತಿಕಲ್ ಸತೀಶ್ ಆಚಾರ್ಯರಿಗೆ ಗೌರವ ಸನ್ಮಾನ

Suddi Udaya

ಫೆ.25: ಪಾಲೇದು ಶ್ರೀ ಮಹಮ್ಮಾಯಿ ಭೈರವ, ಸಹಪರಿವಾರ ಕ್ಷೇತ್ರದ ಶಿಲಾನ್ಯಾಸ ;ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಚಾರ್ಮಾಡಿ ಗ್ರಾಮದ ಕುಂಡೊಟ್ಟುಗೆ ಲೋಕೋಪಯೋಗಿ ಸಚಿವರ ಭೇಟಿ ಸ್ಥಳೀಯರ ಅಹವಾಲು ಸ್ವೀಕಾರ

Suddi Udaya
error: Content is protected !!