ಬೆಳ್ತಂಗಡಿ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪೂರ್ವಭಾವಿ ಪ್ರಕ್ರಿಯೆಗಳು ಆರಂಭಗೊಂಡಿದೆ. ಅದರಂತೆ ಸರಕಾರವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ಮೀಸಲಾತಿ ಬಿಡುಗಡೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತದ ೩೫ ಸ್ಥಾನಗಳಲ್ಲಿ ೧೮ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ೧೮ ಸಾಮಾನ್ಯ, ಇದರಲ್ಲಿ ೯ ಮಹಿಳೆಗೆ, ೩ ಅನುಸೂಚಿತ ಜಾತಿ ಇದರಲ್ಲಿ ೨ ಮಹಿಳೆಗೆ, ೨ ಅನುಸೂಚಿತ ಪಂಗಡ ಇದರಲ್ಲಿ ೧ ಮಹಿಳೆಗೆ, ೧೦ ಹಿಂದುಳಿದ ವರ್ಗಕ್ಕೆ ಇದರಲ್ಲಿ ೫ ಮಹಿಳೆಯರಿಗೆ, ೨ ಹಿಂದುಳಿದ ವರ್ಗ ಬಿ ಇದರಲ್ಲಿ ೧ ಮಹಿಳೆಗೆ ನಿಗದಿ ಮಾಡಲಾಗಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ತಾಲೂಕು ಪಂಚಾಯತದಲ್ಲಿ ಒಟ್ಟು ೨೨ ಸ್ಥಾನಗಳಲ್ಲಿ ೧೧ ಮಹಿಳೆಯರಿಗೆ ನಿಗದಿಯಾಗಿದೆ. ಅನುಸೂಚಿತ ಜಾತಿ ೨ರಲ್ಲಿ ೧ ಮಹಿಳೆ, ಅನುಸೂಚಿತ ಪಂಗಡ ೧ ಮಹಿಳೆ, ಹಿಂದುಳಿದ ವರ್ಗ ಎ ೬ ಇದರಲ್ಲಿ ೩ ಮಹಿಳೆ, ಹಿಂದುಳಿದ ವರ್ಗ ಬಿ ೧ ಮಹಿಳೆ, ಸಾಮಾನ್ಯ ೧೨ ಇದರಲ್ಲಿ ೫ ಮಹಿಳೆಯರಿಗೆ ಮೀಸಲಿರಿಸಲಾಗಿದೆ.













