34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಪ್ಯಾಕ್ಸ್‌ ನಿಂದ ಗದ್ದೆ ಕೃಷಿಕರಿಗೆ ಉಚಿತ ರಸಗೊಬ್ಬರ

ಬೆಳ್ತಂಗಡಿ: ಗದ್ದೆ ಕೃಷಿಯನ್ನು ಉತ್ತೇಜಿಸುವ ಹಾಗೂ ಭತ್ತ ಬೆಳೆಯುವ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ ಅರ್ಹ ಸದಸ್ಯ ಗದ್ದೆ ಕೃಷಿಕರಿಗೆ ಉಚಿತವಾಗಿ ರಸಗೊಬ್ಬರ ವಿತರಿಸುವ ಯೋಜನೆಗೆ ಮುಂಡಾಜೆ ಶಾಖೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಸಂಘದ ನಿರ್ದೇಶಕಿ ಅಶ್ವಿನಿ ಎ. ಹೆಬ್ಬಾರ್, ಸಿಇಒ ಪ್ರಸನ್ನ ಪರಾಂಜಪೆ, ಶಾಖಾ ವ್ಯವಸ್ಥಾಪಕ ಡೇವಿಸ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮುಂಡಾಜೆ ಶಾಖೆಯಲ್ಲಿ ಅರ್ಹ ಸದಸ್ಯರಿಗೆ ರಸಗೊಬ್ಬರ ವಿತರಿಸಲಾಯಿತು. ಯೋಜನೆಯಡಿ ಒಂದು ಎಕರೆ ಒಳಗೆ ಗದ್ದೆ ಕೃಷಿ ಮಾಡುತ್ತಿರುವ ಸಂಘದ ಸದಸ್ಯರಿಗೆ 2,500 ರೂ. ಮೌಲ್ಯದವರೆಗೆ ರಸಗೊಬ್ಬರ ಉಚಿತವಾಗಿ ನೀಡಲಾಗುತ್ತದೆ. ಎರಡು ಎಕರೆ ಹಾಗೂ ಅದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗದ್ದೆ ಕೃಷಿ ಮಾಡುತ್ತಿರುವ ಸದಸ್ಯರಿಗೆ ಗರಿಷ್ಠ 5,000 ರೂ. ಮೌಲ್ಯದವರೆಗೆ ರಸಗೊಬ್ಬರವನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸಂಘವು ಮುಂಡಾಜೆ, ಕಲ್ಮಂಜ, ಚಿಬಿದ್ರೆ, ತೋಟತ್ತಾಡಿ, ಚಾರ್ಮಾಡಿ ಹಾಗೂ ನೆರಿಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಗದ್ದೆ ಕೃಷಿ ಮಾಡಿಕೊಂಡಿರುವ ಸಂಘದ ಅರ್ಹ ಸದಸ್ಯರಿಗೆ ಯೋಜನೆಯ ಪ್ರಯೋಜನ ದೊರೆಯಲಿದೆ. ಸಾಂಪ್ರದಾಯಿಕ ಗದ್ದೆ ಕೃಷಿ ಹಲವು ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕೃಷಿ ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ, ರಸಗೊಬ್ಬರ ಹಾಗೂ ಇತರ ಕೃಷಿ ಪರಿಕರಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ರೈತರು ಗದ್ದೆ ಕೃಷಿಯಿಂದ ದೂರ ಸರಿಯುತ್ತಿರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸದಸ್ಯ ರೈತರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಿ, ಗದ್ದೆ ಕೃಷಿಯನ್ನು ಮುಂದುವರಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಈ ಯೋಜನೆ ರೂಪಿಸಿದೆ.

ಮುಂದಿನ ತಿಂಗಳಲ್ಲಿ ಸಂಘದ ವತಿಯಿಂದ ಸದಸ್ಯರಿಗೆ ಅನುಕೂಲ ಕಲ್ಪಿಸುವ ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ಇದೆ. ಸಹಕಾರಿ ಸಂಘದ ಸೇವೆಗಳು ಕೇವಲ ಸಾಲ ಮತ್ತು ಹಣಕಾಸು ವ್ಯವಹಾರಗಳಿಗೆ ಸೀಮಿತವಾಗದೆ, ಸದಸ್ಯರ ಕೃಷಿ ಚಟುವಟಿಕೆಗಳಿಗೆ ನೇರವಾಗಿ ನೆರವಾಗುವಂತಿರಬೇಕು ಎಂಬ ಉದ್ದೇಶದಿಂದ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ ನಾರಾಯಣ ಕೆ. ತಿಳಿಸಿದ್ದಾರೆ.

Related posts

ಉತ್ತರಾಖಂಡ ಸುರಖಂಡ ಶಕ್ತಿ ಪೀಠಕ್ಕೆ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ

Suddi Udaya

ಬೆಳ್ತಂಗಡಿ ತಾ.ಪಂ.ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 132 ನೇ ಜನ್ಮದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕುಣಿತಾ ಭಜನೆಯೊಂದಿಗೆ ಹುಟ್ಟು ಹಬ್ಬ ಆಚರಣೆ

Suddi Udaya

ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಬಳಂಜ ಆಯ್ಕೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya
error: Content is protected !!