34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಪಂಚ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಸಭೆ

ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೆಸ್ಕಾಂ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು. ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು ಚರ್ಚಿಸಲಾಯಿತು.

ಗೃಹಲಕ್ಷ್ಮೀ ಯೋಜನೆಯಡಿ ಪ್ರಸ್ತುತ 59204 ಫಲಾನುಭವಿಗಳಿದ್ದು, ಆಗಸ್ಟ್-2023‌ ರಿಂದ ಜೂನ್‌ 2026 ರವರೆಗೆ ತಾಲೂಕಿನ ಅರ್ಹ ಗೃಹಲಕ್ಷ್ಮೀ ಯೋಜನೆಯ ಕುಟುಂಬಗಳಿಗೆ 351,39,44‌,000/-ರೂ ಸಹಾಯಧನ ದೊರೆತಿರುವುದಾಗಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆ ಮಾಡುವ ಕಾರ್ಯವು ಎಸ್.ಈ.ಆರ್ ಕರ್ತವ್ಯ ಮುಗಿದ ಕೂಡಲೇ ನಡೆಸುವುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರು ಸಭೆಗೆ ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2026ರ ಆಗಸ್ಟ್ ಮಾಹೆಯಲ್ಲಿ 27197 ಕುಟುಂಬಗಳಿಗೆ 1,38,94,050/- ರೂ, ಹಾಗೂ ಬೆಳ್ತಂಗಡಿ ಉಪವಿಭಾಗದಲ್ಲಿ 2026ರ ಆಗಸ್ಟ್ ಮಾಹೆಯಲ್ಲಿ 45896 ಕುಟುಂಬಗಳಿಗೆ 2,72,72,912/-ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ 1,41,13,72,541/- ರೂ ಸಹಾಯಧನ ದೊರೆತಿರುವುದಾಗಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ತಿಳಿಸಿದರು. ತಾಲೂಕಿನ ಅರ್ಹ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವು ಬಹತೇಕ ಪೂರ್ಣಗೊಂಡಿದ್ದು, ಯಾವುದಾದದರೂ ಫಲಾನುಭವಿಗಳು ಬಿಟ್ಟು ಹೋದಲ್ಲಿ, ಆಯಾ ಮೆಸ್ಕಾಂ ಇಲಾಖೆಯ ಕಚೇರಿಗೆ ತೆರಳಿ ಮಾಹಿತಿಯನ್ನು ನೀಡಬಹುದೆಂದು ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.

ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2026ರ ವರೆಗೆ ತಾಲೂಕಿನಲ್ಲಿ ಒಟ್ಟು 48388 ಪಡಿತರ ಚೀಟಿಗಳಲ್ಲಿ 46577 ಪಡಿತರ ಚೀಟಿಗಳಿಗೆ ವಿತರಿಸಲಾಗಿ ಶೇಕಡಾ 96.26% ರಂತೆ 19676 ಕ್ವಿಂಟಾಲ್‌ ಪಡಿತರ ಅಕ್ಕಿ ವಿತರಿಸಲಾಗಿದೆ. ತಾಲೂಕಿನಲ್ಲಿ 5 ವರ್ಷ ಪೂರ್ಣಗೊಳಿಸಿದ ಪಡಿತರ ಚೀಟಿಯ ಇ-ಕೆವೈಸಿ ಕಾರ್ಯವು ಪ್ಗಗತಿಯಲ್ಲಿದ್ದು, ದಿನಾಂಕ 05/10/2026ರ ವರೆಗೆ ತಾಲೂಕಿನಲ್ಲಿ ಶೇಕಡಾ 75.94% ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಆಹಾರ ನಿರೀಕ್ಷಕರು ಸಭೆಗೆ ವಿವರ ನೀಡಿದರು.

ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ 2026ರ ಆಗಸ್ಟ್‌ ತಿಂಗಳಲ್ಲಿ ಒಟ್ಟು 7,70,487 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-2023‌ ರಿಂದ ಈವರೆಗೆ ರೂ.123,10,96,528/- ಖರ್ಚು ಭರಿಸುವುದಾಗಿ ಧರ್ಮಸ್ಥಳ ಘಟಕದ ಮೇಲ್ವಿಚಾರಕರು ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 8272 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 1241 ಅಭ್ಯರ್ಥಿಗಳು ನೋಂದಣಿಗೊಂಡಿರುತ್ತಾರೆ. ತಾಲೂಕಿನಲ್ಲಿ ಒಟ್ಟು 1132 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಸಹಾಯಧನವನ್ನು ವಿತರಿಸಲಾಗಿದ್ದು, ಈವರೆಗೆ 3,33,52,500 ರೂ.ಗಳನ್ನು ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಶ್ರೀಮತಿ ಮಂಜೂಷರವರು ತಿಳಿಸಿದರು.

ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿ ಸೋಜಾ, ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ವಂದನಾ ಕುಮಾರಿ, ಸೌಮ್ಯ ಲಾಯಿಲ, ಮೆರಿಟಾ ಪಿಂಟೋ, ವೀರಪ್ಪ ಮೊಯ್ಲಿ, ವಿಜಯ ಗೌಡ ಬೆಳಾಲು, ಶರೀಫ್‌ ಶಬರಬೈಲ್‌, ಕೆ.ನೇಮಿರಾಜ್‌ ಕಿಲ್ಲೂರು, ಸತೀಶ ಹೆಗ್ಡೆ, ಕೇಶವ ನಾಯ್ಕ, ಅಬ್ದುಲ್‌ ಸಲಾಂ. ಹಾಗೂ ನೋಡೆಲ್‌ ಅಧಿಕಾರಿಯಾದ ಹೆರಾಲ್ಡ್‌ ಸ್ವಿಕ್ವೇರಾ ಉಪಸ್ಥಿತರಿದ್ದರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸುಜಿತಾ ವಿ. ಬಂಗೇರ ಮತ್ತು ಬಿನುತಾ ಬಂಗೇರ ಭೇಟಿ

Suddi Udaya

ಅವಳಿ ಸಹೋದರಿಯರ ವಿಶೇಷ ಸಾಧನೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ

Suddi Udaya

ಜೂ 29 :ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳವರಿಂದ ತಪ್ತಮುದ್ರಾಧಾರಣೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಳ್ಳಿ ಸಂತೆ

Suddi Udaya

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಕಾರ್ಯಾಗಾರ ಸಂಪನ್ನ

Suddi Udaya

ಮುಂಡೂರು: ವಿಶ್ವನಾಥ ಪೂಜಾರಿ ನಿಧನ

Suddi Udaya
error: Content is protected !!