33.7 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ. 18 : ಬಳಂಜ ಶಾರದೋತ್ಸವದಲ್ಲಿ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ- ವಿಜೇತರಿಗೆ ಪ್ರಶಸ್ತಿ, ಎಲ್ಲರಿಗೂ ಪ್ರಮಾಣಪತ್ರ

ಬಳಂಜ: ಕಳೆದ 48 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದು, ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
4ನೇ ವರ್ಷದ ಬಳಂಜ ಶಾರದೋತ್ಸವ–2026 ಪ್ರಯುಕ್ತ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದ್ದಾರೆ.

ಅ. 18ರ ಭಾನುವಾರ ಬಳಂಜದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶಾರದೋತ್ಸವ ನಡೆಯಲಿದ್ದು, ಇದರ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯನ್ನು 1ರಿಂದ 3ನೇ ತರಗತಿ, 4ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಗುವುದು. ‘ಶ್ರೀ ಶಾರದಾ ದೇವಿಯ ಚಿತ್ರ’ ಸ್ಪರ್ಧೆಯ ವಿಷಯವಾಗಿದ್ದು, ವಿದ್ಯಾರ್ಥಿಗಳು ಚಿತ್ರವನ್ನು ಮನೆಯಲ್ಲಿಯೇ ಬಿಡಿಸಿ ಬೆಳಿಗ್ಗೆ 10 ಗಂಟೆಯೊಳಗೆ ಸಮುದಾಯ ಭವನಕ್ಕೆ ತಂದು ಸಲ್ಲಿಸಬೇಕು.

ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಗುವುದು.

ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಶಾರದೋತ್ಸವದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದ್ದಾರೆ.ಮಾಹಿತಿಗಾಗಿ: 8971689755 ಈ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.

Related posts

ತಣ್ಣೀರುಪಂತ ಗ್ರಂಥಾಲಯ ಸಲಹಾ ಸಮಿತಿ ಸಭೆ

Suddi Udaya

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆ

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

2027 ಮಾರ್ಚ್ 19 – 28; ಕಾಜೂರು ಮಖಾಂ ಉರೂಸ್: ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಎ.ಪಿ ಉಸ್ತಾದ ರಿಂದ ಪೋಸ್ಟರ್ ಬಿಡುಗಡೆ

Suddi Udaya

ಇಕೋಫ್ರೆಶ್ ಎಂಟರ್ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆಯವರಿಂದ ರೈತರತ್ನ ಪ್ರಶಸ್ತಿ ಪುರಸ್ಕೃತ ಕುತ್ಲೂರು ಶಾಲೆಗೆ ಕಳೆಕೊಚ್ಚುವ ಯಂತ್ರ ಕೊಡುಗೆ

Suddi Udaya
error: Content is protected !!