24.3 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ವರ್ತಕರ ಕುಟುಂಬ ಮಿಲನ -2026 ಉದ್ಘಾಟನೆ: ಆಟೋಟ ಸ್ಪರ್ಧೆ, ತಿಂಡಿ-ತಿನಿಸು, ನೃತ್ಯ ಸಂಭ್ರಮ

ಉಜಿರೆ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ-2026′ ಕಾರ್ಯಕ್ರಮ ಅ.10ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ವರ್ತಕರ ಸಂಘದ ಗೌರವಾಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ದೀಪ ಪ್ರಜ್ವಲನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಬಿಎಸ್ ವಹಿಸಿದ್ದರು.

ವೇದಿಕೆಯಲ್ಲಿ ಉಜಿರೆ ಮಂಜುನಾಥ ಟ್ರೇಡರ್ಸ್ ನ ರಾಮಣ್ಣ ಗೌಡ, ಉಜಿರೆ ಎಂಎಂ ಪ್ಲಾಸ್ಟಿಕ್ ನ ಶರೀಫ್, ಗ್ಯಾರೇಜ್ ಮಾಲಕರ ಸಂಘ ಬೆಳ್ತಂಗಡಿ ಸೆಂಟರ್ ಉಪಾಧ್ಯಕ್ಷ ಪ್ರವೀಣ್ ಎನ್.ಎಸ್., ನಿಕಟಪೂರ್ವ ಅಧ್ಯಕ್ಷ ಅರವಿಂದ ಕಾರಂತ್, ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಯು.ಎಚ್., ಕೋಶಾಧಿಕಾರಿ ವಿಶ್ವನಾಥ ಭಂಡಾರಿ ಉಪಸ್ಥಿತರಿದ್ದರು.

ಉಷಾ ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಸುನಿಲ್ ದೇವಾಡಿಗ ಪ್ರಾರ್ಥಿಸಿದರು. ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರ, ನ್ಯಾಯವಾದಿ ಧನಂಜಯ ರಾವ್, ಸಹಕಾರ್ಯದರ್ಶಿ ಅಕ್ಷಯ್ ರಾವ್, ರಮಾನಂದ, ಸಂಚಾಲಕ ಲಕ್ಷ್ಮಣ್ ಗೌಡ, ಉಪಾಧ್ಯಕ್ಷರುಗಳಾದ ರವಿಕುಮಾರ್ ಬರಮೇಲು, ಪ್ರವೀಣ್ ಫೆರ್ನಾಂಡಿಸ್, ಜಯಂತ್ ಮಡಿವಾಳ, ಹುಕ್ಕಾರಾಂ ಪಟೇಲ್, ಇಬ್ರಾಹಿಂ ಬಿ.ಎಚ್‌., ಶಿವಾನಂದ, ಮಂಜುನಾಥ ಬಾಳಿಗ, ಗೀತಾ ಬೆಂಡೆ, ಝೀನತ್ ಉಜಿರೆ, ಎಂ.ಎಸ್. ದಿನೇಶ್, ಪ್ರಶಾಂತ್ ಜೈನ್, ಪ್ರಭಾಕರ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾದ ಸುವರ್ಣ ಮೋಹನ್ ರಾವ್, ಸುಜಾತ ಉಜಿರೆ, ನಾಗೇಶ್ ಪಿ., ದೇವಪ್ಪ ಗೌಡ, ಶಿವಪ್ರಸಾದ್, ಸಾಂಸ್ಕೃತಿಕ ಚಟುವಟಿಕೆಯ ಸುನಿಲ್ ದೇವಾಡಿಗ, ಭವ್ಯ ಕೀರ್ತಿರಾಜ್, ಹರೀಶ್ ಆಚಾರ್ಯ, ಮುಖ್ಯ ಸಲಹೆಗಾರರಾದ ರಿಚರ್ಡ್ ಸಲ್ದಾನ, ಸುಭಾಷ್ ಗೌಡ, ಸುರೇಶ್ ಹೆಬ್ಬಾರ್ ಉಪಸ್ಥಿತರಿದ್ದರು.

ಉಜಿರೆಯ ಪ್ರತಿಭಾನ್ವಿತ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಲಿಂಬೆ-ಚಮಚ ಓಟ, ಹಗ್ಗಜಗ್ಗಾಟ, ಗೋಣಿ ಚೀಲ ಓಟ, ಸಂಗೀತ ಕುರ್ಚಿ, ಚಕ್ಕುಲಿ ತಿನ್ನುವ ಸ್ಪರ್ಧೆ, ಮೈದ ಕಾರ್ಡ್, ಆನೆಗೆ ಬಾಲ ಬಿಡಿಸುವುದು, ಬಲೂನ್ ಒಡೆಯುವುದು ಸೇರಿದಂತೆ ಹಲವು ಮನರಂಜನಾ ಸ್ಪರ್ಧೆಗಳು ನಡೆಯಲಿವೆ.

ಇದರೊಂದಿಗೆ ಸುಮಾರು 20 ಬಗೆಯ ವಿವಿಧ ತಿಂಡಿ-ತಿನಿಸುಗಳ ಸವಿಯೂಟ, ಸೆಲ್ಪಿ ಮತ್ತು ರೀಲ್ಸ್ ಸ್ಪರ್ಧೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಲಕ್ಕಿ ಕೂಪನ್ ಲಾಗುವುದು. ಲಕ್ಕಿ ಡ್ರಾದಲ್ಲಿ ಬೋಟ್ ವಾಚ್ ಬಹುಮಾನವಾಗಿ ನೀಡಲಾಗುವುದು. ಸಂಘದ ಎಲ್ಲ ವರ್ತಕ ಸದಸ್ಯರಿಗೆ ವಿಶೇಷ ಉಡುಗೊರೆಯನ್ನೂ ನೀಡಲಾಗುವುದು.

Related posts

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನೆ ದಿನಾಚರಣೆ

Suddi Udaya

ಅಕ್ರಮವಾಗಿ ದಾಸ್ತಾನು ಮಾಡಿದ್ದ ಡಿಸೇಲ್ ಪತ್ತೆ: ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಅಗಲೀಕರಣದೊಂದಿಗೆ ಡಾಮರೀಕರಣಕ್ಕೆ ಚಾಲನೆ

Suddi Udaya

ಅಳದಂಗಡಿ: ಸತತ ಪರಿಶ್ರಮವಿದ್ದರೆ ಅಸಾಧ್ಯವಾದ್ದದ್ದು ಯಾವುದು ಇಲ್ಲ: ಸಿ. ಎ. ನಿರೀಕ್ಷಾ ಎನ್

Suddi Udaya

ಮಚ್ಚಿನ: ಅನುಮತಿ ಇಲ್ಲದೆ ಮರ ಕಡಿದು ಮೂರು ವಿದ್ಯುತ್ ಕಂಬಕ್ಕೆ ಹಾನಿ; ಮೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಕ್ಕೆ ದಂಪತಿಗಳಿಗೆ ಹಲ್ಲೆ

Suddi Udaya

ಕಲ್ಮಂಜ: ಪರಾರಿ ಮನೆ ಪ್ರಗತಿಪರ ಕೃಷಿಕ ರಾಜಶೇಖರ ಹೆಬ್ಬಾರ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!