24.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆಯಲ್ಲಿ ‘ಪ್ರೇರಣಾ 2026’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಯಶಸ್ವಿ

ಬಂಟರ ಯಾನೆ ನಾಡವರ ಸಂಘ (ರಿ.), ಬೆಳ್ತಂಗಡಿ ತಾಲೂಕು ಇದರ ಮಹಿಳಾ ಬಂಟರ ವಿಭಾಗ ಹಾಗೂ ಯುವ ಬಂಟರ ವಿಭಾಗದ ಜಂಟಿ ಆಶ್ರಯದಲ್ಲಿ ಅ. 11ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ‘ಪ್ರೇರಣಾ 2026’ ವೃತ್ತಿ ಮಾರ್ಗದರ್ಶನ ಮತ್ತು ಪರಿಚಯಾತ್ಮಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

9ನೇ ತರಗತಿಯಿಂದ ಪದವಿ ಹಂತದವರೆಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 200 ಬಂಟ ಸಮುದಾಯದ ವಿದ್ಯಾರ್ಥಿಗಳು ಭಾಗವಹಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ದಿಶಾ ಕೌನ್ಸೆಲಿಂಗ್ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥೆ, ವೃತ್ತಿ ಮಾರ್ಗದರ್ಶಕಿ ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ಹಾಗೂ ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ವೃತ್ತಿ ಆಯ್ಕೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಕುಮಾರ್ ಹೆಗ್ಡೆ ಉದ್ಘಾಟಿಸಿದರು. ಮಹಿಳಾ ಬಂಟರ ವಿಭಾಗದ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ನೋಚ್ಚ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನೀಡಿದರು.

ಸಭೆಯಲ್ಲಿ ಯುವ ಬಂಟರ ವಿಭಾಗದ ಅಧ್ಯಕ್ಷರಾದ ಅಜಯ್ ಶೆಟ್ಟಿ ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ರಾಜು ಶೆಟ್ಟಿ, ಬೆಂಗ್ಯಾತರು, ಮಾತೃ ಸಂಘದ ಸಂಚಾಲಕಾರದ ಜಯರಾಮ್ ಭಂಡಾರಿ ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶ್ರೀಮತಿ ವಸುಧಾ ಪ್ರಶಾಂತ್ ಶೆಟ್ಟಿ, ಮಹಿಳಾ ಬಂಟರ ವಿಭಾಗದ ಕಾರ್ಯದರ್ಶಿ ಸಂಸ್ಕೃತಿ ರೈ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಯುವ ಬಂಟರ ವಿಭಾಗದ ಕಾರ್ಯದರ್ಶಿ ನಿಧೀಶ್ ಶೆಟ್ಟಿ ಬಂಟರ ವಿಭಾಗದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ವಸುಧಾ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಹರ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವ ಬಂಟರ ವಿಭಾಗದ ಕಾರ್ಯದರ್ಶಿ ನಿಧೀಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Related posts

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ಕಳೆಂಜ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಪೋಕ್ಸೋ ಪ್ರಕರಣ: ಸರಿಯಾದ ತನಿಖೆಯನ್ನು ಮಾಡಿ ಸತ್ಯಾಂಶವನ್ನು ಹೊರ ತರುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು: ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ

Suddi Udaya

ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಅರಸಿನಮಕ್ಕಿ: ಮಕ್ಕಳ ಸಂಸ್ಕಾರ ಶಿಬಿರದ ಮಾಹಿತಿ ಕರಪತ್ರ ಬಿಡುಗಡೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಾಂಸ್ಥಿಕ ತರಬೇತಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ದಳದಿಂದ ಚಾರಣ, ಸ್ವಚ್ಚತಾ ಆಂದೋಲನ ಮತ್ತು ಯುವ ದಿನಾಚರಣೆ

Suddi Udaya
error: Content is protected !!