ಮಡಂತ್ಯಾರು: ಬೆಂಗಳೂರು ಓಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯು ಅ.11ರಂದು ಬೆಂಗಳೂರು ಕೆ.ಆರ್. ಪುರಂ ಟಿ.ಸಿ. ಪಾಳ್ಯ ಶಿಶು ಮಂದಿರ್ ಆಡಿಟೋರಿಯಂ ಭಟ್ಟರಹಳ್ಳಿ ರಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ 8ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಬಿಎಮ್ ರಝಾಕ್ ರವರ ಪುತ್ರಿ ರಿಹಾ ಫಾತಿಮಾ ಅವರು -15ರ ವಯೋಮಾನದ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ Purple Belt ಕಟಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಕರಾಟೆ ತರಬೇತುದಾರರಾದ ಅಶೋಕ್ ಆಚಾರ್ಯ ಅವರು ತರಬೇತಿಯನ್ನು ನೀಡಿರುತ್ತಾರೆ. ಹಾಗೂ ನಮ್ಮ ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜ ಮತ್ತು ಮಂಜುನಾಥ ಅವರು ಸಹಕಾರ ನೀಡಿರುತ್ತಾರೆ.












