ಬೆಳ್ತಂಗಡಿ: ಅ. 14 ರಿಂದ ಅ.16 ರವರೆಗೆ 3ದಿವಸ ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಕಚೇರಿಯ ಹೊರಂಗಣದಲ್ಲಿ ಸೇವಾ ಸೇತು ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಮನೆಗಳಿಗೆ Solar Rooftop ಅಳವಡಿಸುವ ಬಗ್ಗೆ vendor ಗಳಿಂದ ಮಾಹಿತಿ, ಮಾರ್ಗದರ್ಶನ, ಸ್ಥಳದಲ್ಲಿಯೇ ಅರ್ಜಿ ಸಲ್ಲಿಸುವಿಕೆಗೆ ನೆರವು, ಸಬ್ಸಿಡಿಯ ಬಗ್ಗೆ ಮಾಹಿತಿ, ಸಾಲ ಸೌಲಭ್ಯಗಳ ಬಗ್ಗೆ ಬ್ಯಾಂಕ್ ನವರಿಂದ ಮಾಹಿತಿ, ಎಲ್ಲವನ್ನೂ ಒಂದೇ ಸ್ಥಳದಲ್ಲಿ ಆಯೋಜಿಸಲಾಗಿದೆ.
ಈ ಸೇವಾ ಸೇತು ಅಭಿಯಾನದ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ವಿದ್ಯುತ್ ಬಳಕೆದಾರರು ಪಡೆದು ಕೊಳ್ಳುವಂತೆ ಮೆಸ್ಕಾಂ ಇಲಾಖೆಯಿಂದ ಕೋರಲಾಗಿದೆ.
ಬರುವಾಗ ವಿದ್ಯುತ್ ಬಿಲ್ಲು, ಅರ್ಜಿದಾರರ ಪಾಸ್ ಪೋರ್ಟ್ ಸೈಜ್ ಫೋಟೋ , ಆಧಾರ್ ಕಾರ್ಡ್ ಹಾಗೂ OTP ಗಾಗಿ ಮೊಬೈಲ್ ತರತಕ್ಕದ್ದು
ಸೋಲಾರ್ ಅಳವಡಿಸಲು ಬ್ಯಾಂಕ್ ಲೋನ್ ಬೇಕಿದ್ದಲ್ಲಿ, ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್ ಸೈಜ್ ಫೋಟೋ-2 , ಪಾನ್ ಕಾರ್ಡ್ ಇದ್ದಲ್ಲಿ ತರತಕ್ಕದ್ದು.












