33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಳ್ಯದ ಕಲ್ಮಡ್ಕದಲ್ಲಿ ವಿದ್ಯುತ್ ಶಾಕ್ ಗೆ ಬೆಳ್ತಂಗಡಿ ಓಡಿಲ್ನಾಳದ ಮುಂಗೇಲು ನಿವಾಸಿ ರಮೇಶ ಬಲಿ

ಬೆಳ್ತಂಗಡಿ: ಸುಳ್ಯದ ಕಲ್ಮಡ್ಕದಲ್ಲಿ ವಿದ್ಯುತ್ ಶಾಕ್ ಗೆ ಒಳಗಾಗಿ ಬಾವ ಮತ್ತು ಬಾಮೈದ ಮೃತಪಟ್ಟ ಘಟನೆ ದಾರುಣ ಘಟನೆ ಅ.12ರಂದು ರಾತ್ರಿ ನಡೆದಿದೆ.

ಸುಳ್ಯ ತಾಲೂಕಿನ ಕಲ್ಮಡ ಬೊಮ್ಮೆಟ್ಟಿ ಬಾಬು ಸೀತಾ ದಂಪತಿಗಳ ಪುತ್ರ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಂಗೇಲು ವೀರಪ್ಪ ಮತ್ತು ಸೀತಮ್ಮ ದಂಪತಿಗಳ ಪುತ್ರ ರಮೇಶ ಯಾನೆ ಗಣೇಶ್(34) ಮೃತಪಟ್ಟವರು. ಬಾಲಕ ಸಿಂಚನ್ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ಅ 12ರಂದು ರಾತ್ರಿ ಭರತ್ (28), ಕಲ್ಮಡ್ಕ ಸುಳ್ಯ ಮತ್ತು ರಮೇಶ್‌@ ಗಣೇಶ್ (36), ಓಡಿಲ್ನಾಳ ಗ್ರಾಮ ಗುರುವಾಯನಕೆರೆ ಬೆಳ್ತಂಗಡಿ ರವರು ಇನ್ನೊಬ್ಬ ಅಪ್ರಾಪ್ತ ಬಾಲಕ ಸಿಂಚನ್ ನೊಂದಿಗೆ ಸುಳ್ಯದ ಕಲ್ಮಡ್ಕ ಗ್ರಾಮದಲ್ಲಿನ ಹೊಳೆಕ್ಕೆರೆ ಎಂಬಲ್ಲಿ ತೋಡಿನಲ್ಲಿ ಹರಿಯುವ ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದರು. ತೋಡಿನಲ್ಲಿ ಮೀನು ಹಿಡಿಯುತ್ತಾ ಮುಂದೆ ಸಾಗುತ್ತಿರುವ ಸಂದರ್ಭದಲ್ಲಿ ತೋಡಿನ ಪಕ್ಕದಲ್ಲಿನ ಮಧುಸೂದನ್ ಭಟ್ ಎಂಬವರ ತೋಟದಿಂದ ವಿದ್ಯುತ್ ವಿದ್ಯುತ್ ಪ್ರವಹಿಸಿ ಬಿದ್ದಿದ್ದು, ಇದನ್ನು ಭರತ್ ಹಾಗೂ ರಮೇಶ್ ರವರು ದಾಟಿದ ಸಂದರ್ಭ ತಂತಿ ತಾಗಿ. ವಿದ್ಯುತ್ ಶಾಕ್ ತಗುಲಿತ್ತು. ಬಾಲಕ ಸಿಂಚನ್ ರಿಗೂ ತಂತಿ ತಾಗಿದ್ದು ಅವರಿಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಬಾಲಕ ತನ್ನ ಸಂಬಂಧಿಕರೊಂದಿಗೆ ಸದ್ರಿ ವಿಷಯವನ್ನು ತಿಳಿಸಿ ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಸದ್ರಿ ಭರತ್ ಮತ್ತು ರಮೇಶ್‌ @ ಗಣೇಶ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಹಾಗೂ ಗಾಯಗೊಂಡ ಬಾಲಕನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.ಈ ಬಗ್ಗೆ ಅನಧಿಕೃತವಾಗಿ ತೋಟಕ್ಕೆ ವಿದ್ಯುತ್ ಅಳವಡಿಸಿರುವ ಮಧುಸೂದನ್ ಭಟ್ ರವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆ.ಕ್ರ 59/2026 ಕಲಂ 105 ಬಿಎನ್ಎಸ್ ಮತ್ತು 135(1)(E) ಎಲೆಕ್ಟ್ರಿಸಿಟಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಡಿ.2: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಯಕ್ಷ ಸಂಭ್ರಮ- 2023: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಲು ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ಮಾಲಾಡಿ: ಪೆರ್ಡೆ ಕ್ರಾಸ್ – ಊರ್ಲ ರಸ್ತೆ ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ

Suddi Udaya

ಪಿಲಿಗೂಡು ಹಾ.ಉ.ಮ.ಸ ಸಂಘದ ಸದಸ್ಯೆ ಜಮೀಲಾ ರವರಿಗೆ ಸಹಕಾರಿ ಸಪ್ತಾಹದಲ್ಲಿ ಕ್ಷೀರ ರತ್ನ ಪ್ರಶಸ್ತಿ

Suddi Udaya

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಪಟ್ರಮೆಯಲ್ಲಿ ಪ್ರಜಾಸೇವಾ ಆಂದೋಲನ ಸಭೆ

Suddi Udaya
error: Content is protected !!