ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಭಜನಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ರತ್ನಾಕರ ಉರುವಾಲು ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಠಲ ಶೆಟ್ಟಿ ಕೊಲ್ಲೊಟ್ಟು, ಗೋಪಾಲಕೃಷ್ಣ ಗೌಡ ಅಲೈಮಾರ್, ಆಡಳಿತ ಮೊಕ್ತೇಸರರು ಯೋಗಿಶ್ ಪೂಜಾರಿ ಕಡ್ತಿಲ, ಸಹ ಮೊಕ್ತೇಸರರಾದ ಸೇಸಪ್ಪ ರೈ ಕೊರಿಂಜ, ಜೀಣೊ೯ಧ್ಧಾರ ಸಮಿತಿ ಕೋಶಾಧಿಕಾರಿ ಉದಯ ತಾಳಿಂಜ ಹಾಗೂ ನವರಾತ್ರಿ ಉತ್ಸವ ಸಮಿತಿಯ ಸದಸ್ಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
ಶ್ರೀ ಪಂಚಲಿಂಗೇಶ್ವರ ಚಿಣ್ಣರ ಬಳಗ ಕೊರಿಂಜ, ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಕೊರಿಂಜ ಭಜನಾ ಕಾರ್ಯಕ್ರಮ ನಡೆಯಿತು.
ಸೀತಾರಾಮ ಆಳ್ವ ಕೊರಿಂಜ ನಿರೂಪಿಸಿ, ನವರಾತ್ರಿ ಉತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಧಮಾ೯ಡಿ ಸ್ವಾಗತಿಸಿದರು. ಆಡಳಿತ ಮೊಕ್ತೇಸರರು ಯೋಗಿಶ್ ಪೂಜಾರಿ ಕಡ್ತಿಲ ವಂದಿಸಿದರು.












