33.4 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚ್‌ನಲ್ಲಿ ಜಪಾನಿನ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ಮಾತೆ ಮರಿಯಮ್ಮನವರ ಕಲಾಕೃತಿ ಅನಾವರಣ

ನೆಲ್ಯಾಡಿ: ಇಲ್ಲಿನ ಸೆಂಟ್ ಅಲ್ಫೋನ್ಸ ಧರ್ಮಕ್ಷೇತ್ರದ ಯುವ ಸಂಚಾಲನದ (ಎಸ್‌ಎಂವೈಎಂ) ವತಿಯಿಂದ ಸಿದ್ಧಪಡಿಸಲಾದ ಜಪಾನಿನ ಪ್ರಸಿದ್ಧ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ವಿನೂತನ ಮಾತೆ ಮರಿಯಮ್ಮನವರ ಕಲಾಕೃತಿಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಜೇಮ್ಸ್ ಪಟ್ಟೇರಿಲ್ ಅವರು ಉದ್ಘಾಟಿಸಿ ಅನಾವರಣಗೊಳಿಸಿದರು.

ಉದನೆ ಯ ರೆ| ಫಾ ರಿಜೊ, ರೆ| ಫಾ. ಶಿಬಿ ಆರ್ಲ, ರೆ| ಫಾ. ಜಿನ್ಸ್ ಅಡ್ಡ ಹೊಳೆ. ರೆ| ಫಾ. ಬಿನೋಯ್ ಜೋಸೆಫ್ ಶಿರಾಡಿ ಧರ್ಮ ಪ್ರಾಂತಿಯ ಚಾನ್ಸಲರ್ ರೆ| ಫಾ. ಲಾರೆನ್ಸ್ ಪೂಣೋಲಿಲ್ ಟ್ರ ಸ್ಟಿ ಗಳಾದ ರಾಜೇಶ್, ಸೇಬಾಷ್ಟಿಯನ್ ಇವರ ಉಪಸ್ಥಿತಿಯಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ರೆ ಫಾ. ಶಾಜಿ ಮಾತ್ಯು ಸ್ವಾಗತಿಸಿ ಮಾಹಿತಿ ನೀಡಿದರು.

ಟೈಲರಿಂಗ್ ಅಂಗಡಿಗಳಲ್ಲಿ ಬಳಕೆಯ ನಂತರ ಉಳಿಯುವ ಬಟ್ಟೆಯ ಚೂರುಗಳನ್ನು ಸೃಜನಾತ್ಮಕವಾಗಿ ಜೋಡಿಸಿ, ಸುಂದರ ವಿನ್ಯಾಸದ ಮೂಲಕ ರೂಪಿಸಲಾದ ಈ ಅಪರೂಪದ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ. ಕಲಾತ್ಮಕತೆ ಮತ್ತು ಪರಿಸರ ಕಾಳಜಿಯನ್ನು ಒಟ್ಟುಗೂಡಿಸಿರುವ ಈ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೂರಾರು ಮಂದಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚ್‌ಗೆ ಭೇಟಿ ನೀಡಿ, ಮಾತೆ ಮರಿಯಮ್ಮನವರ ಈ ಕಲಾಕೃತಿಯನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಶೇಷ ಕಲಾಕೃತಿಯ ನಿರ್ಮಾಣದಲ್ಲಿ ಯುವ ಸಂಚಾಲನದ ಸದಸ್ಯರಾದ ದಿಶಾ, ಡಿನು, ಜೈಸನ್,ಜಿತು, ಸನುಷಾ, ಅಭಿನ್, ಜೋಯಲ್, ನವೀನ್, ಲಿಟ್ಟೋ, ಶಾನ್, ಅನೂಪ್ ಮತ್ತು ಆಷ್ಟನ್ ಹಾಗೂ ಮಾತೃವೇದಿಯ ಸದಸ್ಯರಾದ ರೋಸಾ ಕುಟ್ಟಿಚ್ಚಿರ, ಬಿಂದು ಜಯೇಶ್, ಶೋಲಿ ಜಾರ್ಜ್ ಮತ್ತು ಪ್ರಿನ್ಸಿ ರಾಜೇಶ್ ಅವರು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರು.
ನೆಲ್ಯಾಡಿ ಸೆಂಟ್ ಅಲ್ಫೋನ್ಸ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಷಾಜಿ ಮ್ಯಾಥ್ಯೂ ಅವರ ಮಾರ್ಗದರ್ಶನದಲ್ಲಿ ಈ ಸೃಜನಾತ್ಮಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

Related posts

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ: ಬೆಳ್ತಂಗಡಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಮೆರವಣಿಗೆ- ರಾಷ್ಟ್ರಪತಿಗೆ ಮನವಿ ಸಲ್ಲಿಕೆ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತಾಲೂಕಿನ ಹಲವು ಕಡೆ ಯೋಗ ದಿನಾಚರಣೆ ಅಂಗವಾಗಿ ಏಕಕಾಲಕ್ಕೆ 20 ತರಬೇತಿ ಕಾರ್ಯಕ್ರಮಗಳು

Suddi Udaya

ಬೆಳ್ತಂಗಡಿ ಮೀಡಿಯಾ ಕ್ಲಬ್ ನ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ

Suddi Udaya

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್‌ನಲ್ಲಿ ಗೋಲ್ಡನ್ ಹಾರ್ವೆಸ್ಟ್ ಪ್ಲಾನ್ ಸ್ಕಿಮ್ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ

Suddi Udaya
error: Content is protected !!