32.7 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಲಿಬಾಲ್ ಪಂದ್ಯಾಟ: ಮೊಗ್ರುವಿನ ಸಹೋದರ -ಸಹೋದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆ ಕುಮಟಾ ಮಹಾತ್ಮಾ ಗಾಂಧಿ ಕ್ರೀಡಾoಗಣದಲ್ಲಿ ಅ. 17 ರಂದು ನಡೆದ 17 ರ ವಯೋಮಾನದ ರಾಜ್ಯಮಟ್ಟದ ಬಾಲಕ ಹಾಗೂ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಗ್ರುವಿನ ಒಂದೇ ಮನೆಯ ಸಹೋದರ ಮಾ.ಪ್ರಣೀಶ್. ಎ. ಮತ್ತು ಸಹೋದರಿ ಕು. ಚೈತನ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿ ಪ್ರಮೀಳಾ ಯಾನೆ ರೇವತಿ ಹಾಗೂ ಕುಶಾಲಪ್ಪ ಗೌಡ ದಂಪತಿಯ ಮಕ್ಕಳು.

ಪ್ರಣೀಶ್.ಎ , ಬಂದಾರು ಸ.ಹಿ.ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿ ತನಕ ವಿದ್ಯಾಭ್ಯಾಸ ಪಡೆದು,ಪ್ರಸ್ತುತ ಬಂಟ್ವಾಳ ತಾಲೂಕಿನ ಕೈರಂಗಳ ಶಾರದಾ ವಿದ್ಯಾಗಣಪತಿ ಪುಣ್ಯಕೋಟಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು , ಇದೇ ಬರುವ ನವೆಂಬರ್ ಗುಜರಾತ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ . ಚೈತನ್ಯ ಬಂದಾರು ಸ. ಹಿ. ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಪಡೆದು, ಪ್ರಸ್ತುತ ಮುಂಡಾಜೆ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದಾರೆ. ಇದೇ ಬರುವ ಡಿಸೆಂಬರ್ ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.


ಇವರಿಬ್ಬರು ಬಾಲ್ಯದಿಂದಲೇ ವಾಲಿಬಾಲ್ ಪಂದ್ಯಾಟದಲ್ಲಿ ಹಲವಾರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

17ರ ವಯೋಮಾನದ ರಾಜ್ಯ ಮಟ್ಟದ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪಂದ್ಯಾಟದ ವಿಭಾಗದಲ್ಲಿ ಪ್ರಣೀಶ್ ಎ ಸ್ಪರ್ಧಿಸಿದ ತಂಡ ರಾಜ್ಯದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಹಾಗೂ 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಚೈತನ್ಯ ಸ್ಪರ್ದಿಸಿದ ತಂಡ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದು ಇವರಿಬ್ಬರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟ ಮಟ್ಟದ ಪಂದ್ಯಾಟದಲ್ಲಿ ಆಡಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇಬ್ಬರ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

Related posts

ಕನ್ಯಾಡಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜಾರಿಗೆ ಮನವಿ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ರಾಜ್ಯ ಮಹಿಳಾಗೋಷ್ಠಿ

Suddi Udaya

ಮನೆ ಬಳಿ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರು ಕಳವು

Suddi Udaya

ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ

Suddi Udaya
error: Content is protected !!