34 C
ಪುತ್ತೂರು, ಬೆಳ್ತಂಗಡಿ
October 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚರ್ಮರೋಗ ಸ್ನಾತಕೋತ್ತರ ಪದವಿಯಲ್ಲಿ ಉಜಿರೆಯ ಡಾ. ಮನಿಷಾ ಎಂ. ರವರು ರಾಜ್ಯಕ್ಕೆ 2ನೇ ರ‍್ಯಾಂಕ್

ಬೆಳ್ತಂಗಡಿ: ದಾವಣಗೆರೆಯ  ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಉಜಿರೆಯ ಡಾ. ಮನಿಷಾ ಎಂ. ಅವರು ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿದ್ದಾರೆ. 

 ಉಜಿರೆ ನಿವಾಸಿಗಳಾದ ಮೋಹನ್ ಕೆ. ಸಾಲಿಯಾನ್ ಮತ್ತು ಸ್ವಪ್ನಾ ದಂಪತಿಯ ಪುತ್ರಿಯಾದ ಇವರು ಬಾಲ್ಯದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿ ಇದ್ದು  ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯನ್ನು  ಉಜಿರೆ ಎಸ್.ಡಿ.ಎಂ ನಲ್ಲಿ ಪೂರ್ಣಗೊಳಿಸಿ,  2016ರಲ್ಲಿ ಎಂಬಿಬಿಎಸ್ ಪ್ರಾರಂಭಿಸಿ, 2022ರಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಪದವಿ ಪೂರ್ಣಗೊಳಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ಗ್ರಾಮೀಣ ಸೇವೆಯನ್ನು (Rural Service) ನಿರ್ವಹಿಸಿದರು. ಈ ಅವಧಿಯಲ್ಲಿಯೇ ‘ನೀಟ್ ಪಿಜಿ’ (NEET PG) ಪರೀಕ್ಷೆಯನ್ನು ಬರೆದು, 6609ನೇ ಶ್ರೇಯಾಂಕವನ್ನು (Rank) ಪಡೆದರು.

2023ರಲ್ಲಿ ದಾವಣಗೆರೆಯಲ್ಲಿ ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಎಂಡಿ (MD) ಡರ್ಮಟಾಲಜಿ (ಚರ್ಮರೋಗ ವಿಜ್ಞಾನ) ಅಧ್ಯಯನ ಮಾಡಿ ಈ ಅವಧಿಯಲ್ಲಿ, ಐಎಡಿವಿಎಲ್ (IADVL) ಕರ್ನಾಟಕ ಶಾಖೆಯ ‘ಯುವಡರ್ಮಾ’ (Yuvaderma) ನಿಯತಕಾಲಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.  

2025ರಲ್ಲಿ  ಮಂಗಳೂರಿನ ರೇವತಿ ಮತ್ತು ವಿವೇಕ್ ದಂಪತಿಯ ಪುತ್ರ ವಿಖ್ಯಾತ್ ಸುವರ್ಣ (ME, MBA – IIM ಬೆಂಗಳೂರು ) ಇವರನ್ನು ವಿವಾಹವಾದರು. ಪ್ರಸುತ್ತ ಇವರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

Related posts

ಪೀತಾಂಬರ ಹೇರಾಜೆಯವರ ಮನೆಯಲ್ಲಿ ರೋಟರಿ ಕ್ಲಬ್ ಕುಟುಂಬೋತ್ಸವ

Suddi Udaya

ನಾವೂರು ಆಟೋ ಚಾಲಕ ಲಿಂಗಪ್ಪಗೌಡರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ, ಪೋಷಕರ ಸಭೆ

Suddi Udaya

ಮುಂಡಾಜೆ ಅಂಗನವಾಡಿಗೆ ಲಯನ್ಸ್ ಕ್ಲಬ್ ನಿಂದ ಚಾಪೆ ಕೊಡುಗೆ

Suddi Udaya

ಬೆಳ್ತಂಗಡಿ ಎಸ್.ಕೆಎಸ್.ಎಸ್.ಎಫ್ ನಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮ

Suddi Udaya
error: Content is protected !!