26.6 C
ಪುತ್ತೂರು, ಬೆಳ್ತಂಗಡಿ
October 26, 2026
ಅಪಘಾತಕೃಷಿಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಮಲವಂತಿಗೆ: ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು

ಬೆಳ್ತಂಗಡಿ ಮಲವಂತಿಗೆ ಗ್ರಾಮದ ಕೆಳಗಿನ ಮಕ್ಕಿ ಹಾಗೂ ಮೇಲಿನ ಮಕ್ಕಿ ಪ್ರದೇಶಗಳಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟುಮಾಡಿದೆ. ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆಗಳು ನೂರಾರು ಅಡಕೆ ಮರಗಳು, ತೆಂಗಿನ ಮರಗಳು ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಸ್ಥಳೀಯ ಕೃಷಿಕರಾದ ಶೀನಪ್ಪ ಗೌಡ, ಆನಂದ ಗೌಡ, ಪುರಂದರ, ಜಯರಾಮ ಸೇರಿದಂತೆ ಹಲವರ ತೋಟಗಳಿಗೆ ಕಾಡಾನೆ ಹಿಂಡು ನುಗ್ಗಿ ದಾಂಧಲೆ ನಡೆಸಿದೆ. ತೋಟದಲ್ಲಿದ್ದ 150ಕ್ಕೂ ಅಧಿಕ ಅಡಕೆ ಮರಗಳನ್ನು ಮುರಿದು ಹಾಕಿದ್ದು, ಐದು ತೆಂಗಿನ ಮರಗಳಿಗೂ ಹಾನಿ ಮಾಡಿದೆ. ಅಲ್ಲದೆ, ಅಪಾರ ಪ್ರಮಾಣದ ಬಾಳೆ ಕೃಷಿಯನ್ನು ತುಳಿದು ಹಾಗೂ ಮುರಿದು ನಾಶಪಡಿಸಿದೆ. ಇದರಿಂದ ಬೆಳೆಗಾರರಿಗೆ ಗಣನೀಯ ಪ್ರಮಾಣದ ನಷ್ಟ ಉಂಟಾಗಿದೆ.

ಏಳಕ್ಕಿಂತ ಅಧಿಕ ಆನೆಗಳಿರುವ ಶಂಕೆ ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಈ ಕಾಡಾನೆ ಹಿಂಡಿನಲ್ಲಿ ಏಳಕ್ಕಿಂತ ಹೆಚ್ಚು ಆನೆಗಳಿರುವ ಶಂಕೆ ವ್ಯಕ್ತವಾಗಿದೆ. ಹಿಂಡು ಒಟ್ಟಾಗಿ ತೋಟಗಳಿಗೆ ನುಗ್ಗುತ್ತಿರುವುದರಿಂದ ಕೃಷಿ ಬೆಳೆಗಳಿಗೆ ವ್ಯಾಪಕ ಹಾನಿಯಾಗುತ್ತಿದೆ. ರಾತ್ರಿ ವೇಳೆ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡುತ್ತಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ.

ಈ ಭಾಗದಲ್ಲಿ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಅಡಕೆ, ತೆಂಗು ಹಾಗೂ ಬಾಳೆ ಪ್ರಮುಖ ಆದಾಯದ ಮೂಲಗಳಾಗಿವೆ. ವರ್ಷವಿಡೀ ಶ್ರಮವಹಿಸಿ ಬೆಳೆಸಿದ ಮರಗಳು ಹಾಗೂ ಗಿಡಗಳು ಕಾಡಾನೆಗಳ ದಾಳಿಗೆ ಸಿಲುಕಿ ನಾಶವಾಗುತ್ತಿರುವುದು ರೈತರಲ್ಲಿ ಕಳವಳ ಮೂಡಿಸಿದೆ. ಅಡಕೆ ಮರಗಳು ಮುರಿದು ಬಿದ್ದರೆ ಅವು ಮತ್ತೆ ಫಸಲು ನೀಡುವ ಸ್ಥಿತಿಗೆ ಬರಲು ದೀರ್ಘಕಾಲ ಬೇಕಾಗುವುದರಿಂದ ನಷ್ಟದ ಪರಿಣಾಮ ಹಲವು ವರ್ಷಗಳವರೆಗೆ ಮುಂದುವರಿಯುವ ಆತಂಕವೂ ಇದೆ.

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು: ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಸಮಾರಂಭ

Suddi Udaya

ಇಂದಬೆಟ್ಟು: ಮನ್ನಡ್ಕ ನಿವಾಸಿ ಮಿನ್ಕಿ ಗೌಡ ನಿಧನ

Suddi Udaya

ಗೇರುಕಟ್ಚೆ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಯಾತ್ರೆ ಕೈಗೊಂಡ ರಾಜಾಜಿನಗರದ ಶಾಸಕ ಸುರೇಶ ಕುಮಾರ್

Suddi Udaya

ಮುಂಡಾಜೆ :ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಮಾಜಿ ಶಾಸಕ ವಸಂತ ಬಂಗೇರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪ:ರಾಕೇಶ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಬ್ಲಾಕ್ ಕಾಂಗ್ರೆಸ್ ನಿಂದ ಪೊಲೀಸ್ ದೂರು

Suddi Udaya
error: Content is protected !!