30.1 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನ.2: ಬೆಳ್ತಂಗಡಿಯಲ್ಲಿ ಪ್ರಜಾತಂತ್ರ ಬಚಾವೋ ಆಂದೋಲನ ಸಮಿತಿಯಿಂದ ಬೃಹತ್ ತಿರಂಗಾ ನಡಿಗೆ ಮತ್ತು ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನ.2 ರಂದು ಬೆಳ್ತಂಗಡಿಯಲ್ಲಿ ಪ್ರಜಾತಂತ್ರ ಬಚಾವೋ ಆಂದೋಲನ ಸಮಿತಿ ವತಿಯಿಂದ ಬೃಹತ್ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂವಿಧಾನ ವಿರೋಧಿ ಎಸ್ಐಆರ್ ನಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಹಕ್ಕುಗಳು ಅಪಾಯದಲ್ಲಿದ್ದು, ಅರ್ಹ ಮತದಾರರನ್ನು ಎಸ್ಐಆರ್ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಆ ಮೂಲಕ ದೇಶದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ಮುಸ್ಲಿಂ , ಕ್ರೈಸ್ತ , ಆದಿವಾಸಿ, ದಲಿತ ಸಮುದಾಯದ ಮತದಾನದ ಹಕ್ಕನ್ನು ಮೊಟಕುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ಬೆಳ್ತಂಗಡಿಯಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಘಂಟೆಗೆ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ತಿರಂಗಾ ನಡಿಗೆ ಕಾರ್ಯಕ್ರಮವನ್ನು ನಡೆಯಲಿದ್ದು , ನಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ತಾಲೂಕಿನ ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘಟನೆಗಳು ಭಾಗವಹಿಸಲಿದ್ದು , ಸಾವಿರಾರು ಜನರು ಭಾಗವಹಿಸಲಿದ್ದಾರೆ.

ಶಿವಸುಂದರ್ ಭಾಗಿ: ನಾಡಿನ ಖ್ಯಾತ ಪ್ರಗತಿಪರ ಚಿಂತಕ , ಅಂಕಣಕಾರ ಮತ್ತು ಹೋರಾಟಗಾರ ಶಿವಸುಂದರ್ ರವರು ಬೆಳ್ತಂಗಡಿಯಲ್ಲಿ ನಡೆಯುವ ಬೃಹತ್ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಜಾತಂತ್ರ ಬಚಾವೋ ಆಂದೋಲನ ಸಮಿತಿ ಸಂಚಾಲಕ ಶೇಖರ್ ಲಾಯಿಲ ತಿಳಿಸಿದ್ದಾರೆ.

Related posts

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯ ಗೌರವ: ಕಾಂಬೋಡಿಯಾ ದೇಶದಲ್ಲಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023 ಸ್ವೀಕರಿಸಿ ಸ್ವದೇಶಕ್ಕೆ ಮರಳಿದ ಸಂಚಾಲಕ ರಾಜೇಶ್ ಪೈ ಉಜಿರೆ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರದರ್ಶನ-ಮಾರಾಟ ಮೇಳ

Suddi Udaya

ಉಜಿರೆ: ಜೀನಿಯಸ್ ಕೋಚಿಂಗ್ ಸೆಂಟರ್ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಉಜಿರೆ ಗ್ರಾ.ಪಂ.ನಲ್ಲಿ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಅರಿವು ಕಾರ್ಯಕ್ರಮ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya
error: Content is protected !!