ಬೆಳ್ತಂಗಡಿ : ಬೆಳ್ತಂಗಡಿ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶದ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಚಲನಚಿತ್ರ “ಗಾಮಿನಿ ” ಅ. 30 ರಂದು ಪುತ್ತೂರು ಜಿ ಎಲ್. ಮಾಲ್, ಸುಳ್ಯದ ಭಾರತ್ ಚಿತ್ರ ಮಂದಿರಗಳಲ್ಲಿ ಹಾಗೂ ಮಂಗಳೂರು, ಬೆಂಗಳೂರು, ಮೈಸೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಗುರುಪ್ರಸಾದ್ ಬೆಳ್ತಂಗಡಿ ಹೇಳಿದರು. ಅವರು ಅ. 28 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಚಲನಚಿತ್ರದ ವಿವರ ನೀಡಿದರು.

ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮೀಣ ಪ್ರದೇಶದಲ್ಲಿ ಮತ್ತು ಬೆಂಗಳೂರಿನಲ್ಲಿ ಸುಮಾರು 25 ದಿನಗಳಲ್ಲಿ ಸೂಟಿಂಗ್ ನಡೆದಿದ್ದು ಸುಮಾರು 70 ಲಕ್ಷ ವೆಚ್ಚದಲ್ಲಿ ಚಿತ್ರೀಕರಣ ಆಗಿದೆ ಎಂದರು.
ನಾಯಕಿ ನಟಿ ಶ್ರೇಯಾ ಸುಳ್ಯ ಮಾತನಾಡಿ ಹೆಣ್ಣನ್ನು ಗೌರವಿಸುವ ಕಥೆಯನ್ನು ಹೊಂದಿರುವ ಈ ಚಿತ್ರ 1 ಗಂಟೆ 42 ನಿಮಿಷ ಅವಧಿಯಲ್ಲಿ 3 ಹಾಡು ಗಳಲ್ಲಿ ಚಿತ್ರೀಕರಣ ಆಗಿರುತ್ತದೆ ಮತ್ತು ನಾನು ನಟಿಸಿರುವ 2ನೇ ಚಿತ್ರ ಎಂದು ಹೇಳಿದರು.
ನಾಯಕ ನಟ ಆಂಜನ್ ತಮ್ಮಯ್ಯ ಮಾತನಾಡಿ ಇದು ನಾನು ನಟಿಸಿರುವ 3 ನೇ ಚಿತ್ರ ಆಗಿದ್ದು ಸಾಮಾಜಿಕ ಚಿತ್ರ ಇದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪೋಷಕ ನಟ ಬೆಳ್ತಂಗಡಿಯ ಬಿ. ಹೆಚ್. ರಾಜು, ಮನಿಶಾ ಶೆಟ್ಟಿ, ಉಷಾ ಪೂಜಾರಿ, ಅಜಿತ್ ಬೆಳ್ತಂಗಡಿ, ಗಣೇಶ್ ಪೂಜಾರಿ, ನಿರಂಜನ್ ಗೌಡ ಗುರುವಾಯನಕೆರೆ, ರವೀಶ್, ರಾಘವೇಂದ್ರ ಪೂಜಾರಿ, ಬರಮೇಲು, ತನಿಶಾ, ಸುಜಯ್, ಸುಮಂತ್, ರಾಜಶೇಖರ್, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಸಹಾಯಕಾರದ ಪ್ರವೀಣ್ ದೇವಾಡಿಗ ಕಕ್ಕಿಂಜೆ, ಸಂದೇಶ್, ಪ್ರಮೀಳಾ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.













