30.1 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅ. 30: ಗಾಮಿನಿ ಚಲನಚಿತ್ರ ಬಿಡುಗಡೆ: ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಗುರು ಪ್ರಕಾಶ್

ಬೆಳ್ತಂಗಡಿ : ಬೆಳ್ತಂಗಡಿ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶದ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಚಲನಚಿತ್ರ “ಗಾಮಿನಿ ” ಅ. 30 ರಂದು ಪುತ್ತೂರು ಜಿ ಎಲ್. ಮಾಲ್, ಸುಳ್ಯದ ಭಾರತ್ ಚಿತ್ರ ಮಂದಿರಗಳಲ್ಲಿ ಹಾಗೂ ಮಂಗಳೂರು, ಬೆಂಗಳೂರು, ಮೈಸೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಗುರುಪ್ರಕಾಶ್ ಬೆಳ್ತಂಗಡಿ ಹೇಳಿದರು. ಅವರು ಅ. 28 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಚಲನಚಿತ್ರದ ವಿವರ ನೀಡಿದರು.

ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮೀಣ ಪ್ರದೇಶದಲ್ಲಿ ಮತ್ತು ಬೆಂಗಳೂರಿನಲ್ಲಿ ಸುಮಾರು 25 ದಿನಗಳಲ್ಲಿ ಸೂಟಿಂಗ್ ನಡೆದಿದ್ದು ಸುಮಾರು 70 ಲಕ್ಷ ವೆಚ್ಚದಲ್ಲಿ ಚಿತ್ರೀಕರಣ ಆಗಿದೆ ಎಂದರು.

ನಾಯಕಿ ನಟಿ ಶ್ರೇಯಾ ಸುಳ್ಯ ಮಾತನಾಡಿ ಹೆಣ್ಣನ್ನು ಗೌರವಿಸುವ ಕಥೆಯನ್ನು ಹೊಂದಿರುವ ಈ ಚಿತ್ರ 1 ಗಂಟೆ 42 ನಿಮಿಷ ಅವಧಿಯಲ್ಲಿ 3 ಹಾಡು ಗಳಲ್ಲಿ ಚಿತ್ರೀಕರಣ ಆಗಿರುತ್ತದೆ ಮತ್ತು ನಾನು ನಟಿಸಿರುವ 2ನೇ ಚಿತ್ರ ಎಂದು ಹೇಳಿದರು.
ನಾಯಕ ನಟ ಆಂಜನ್ ತಮ್ಮಯ್ಯ ಮಾತನಾಡಿ ಇದು ನಾನು ನಟಿಸಿರುವ 3 ನೇ ಚಿತ್ರ ಆಗಿದ್ದು ಸಾಮಾಜಿಕ ಚಿತ್ರ ಇದು ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಪೋಷಕ ನಟ ಬೆಳ್ತಂಗಡಿಯ ಬಿ. ಹೆಚ್. ರಾಜು, ಮನಿಶಾ ಶೆಟ್ಟಿ, ಉಷಾ ಪೂಜಾರಿ, ಅಜಿತ್ ಬೆಳ್ತಂಗಡಿ, ಗಣೇಶ್ ಪೂಜಾರಿ, ನಿರಂಜನ್ ಗೌಡ ಗುರುವಾಯನಕೆರೆ, ರವೀಶ್, ರಾಘವೇಂದ್ರ ಪೂಜಾರಿ, ಬರಮೇಲು, ತನಿಶಾ, ಸುಜಯ್, ಸುಮಂತ್, ರಾಜಶೇಖರ್, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಸಹಾಯಕಾರದ ಪ್ರವೀಣ್ ದೇವಾಡಿಗ ಕಕ್ಕಿಂಜೆ, ಸಂದೇಶ್, ಪ್ರಮೀಳಾ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.

Related posts

ಪಟ್ಟೂರಿನಲ್ಲಿ ಪೊಲೀಸರು ಜಪ್ತಿ ಮಾಡಿದ ಮನೆಗೆ ತಾಲೂಕು ಮುಸ್ಲಿಂ ಮುಖಂಡರ ಭೇಟಿ: ಸಂತ್ರಸ್ತೆ ಝೊಹರಾ ಕುಟುಂಬಸ್ಥರ ಜೊತೆ ಮಾತುಕತೆ

Suddi Udaya

ಉಜಿರೆ: ಅನುಗ್ರಹ ಕಾಲೇಜು ಪ್ರಾರಂಭೋತ್ಸವ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

Suddi Udaya

ಬೆಳಾಲು ಪೆರಿಯಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ ಅವರಿಗೆ ಬೀಳ್ಕೊಡುಗೆ ಸಮಾರಂಭ: ಶಾಲೆಯ ಪ್ರಗತಿಗೆ ಶಿಕ್ಷಕಿ ವಿಜಯರವರ ಕೊಡುಗೆ ಅಪಾರ: ಮೋಹನ್ ಕುಮಾರ್

Suddi Udaya

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ನೂತನ ಟ್ರಸ್ಟಿಗಳ ಪದಗ್ರಹಣ

Suddi Udaya
error: Content is protected !!