30.1 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರೂರಲ್ ಐಟಿ ಕ್ವಿಜ್‌ನಲ್ಲಿ ಉಜಿರೆ ಎಸ್.ಡಿ.ಎಂ. (ಸಿ.ಬಿ.ಎಸ್.ಇ) ಶಾಲಾ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಉಜಿರೆ: ಪುತ್ತೂರಿನ ಸುಧಾನ ಶಾಲೆಯಲ್ಲಿ ಅ. 28ರಂದು ನಡೆದ ಜಿಲ್ಲಾ ಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ನಿನಾದ್ ಅನಂತ್, ತೇಜಸ್ ಕುಲಾಲ್ ಹಾಗೂ ಸಿದ್ಧಾಂತ್ ಭಾಗವಹಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಪೈಕಿ ನಿನಾದ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳು ನವೆಂಬರ್ 2ರಂದು ಮೈಸೂರಿನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಯಲ್ಲಿಯೂ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.

Related posts

ನೆರಿಯ ಸೆಂಟ್ ತೋಮಸ್ ಪ್ರೌಢಶಾಲೆ ಶೇ 100 ರ ಸಾಧನೆಗೆ ಸನ್ಮಾನ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ಕರಾಟೆ ಚಾಂಪಿಯನ್ ಶಿಪ್ : ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಶೇ.100 ತೆರಿಗೆ ವಸೂಲಾತಿ: ನಾವೂರು ಗ್ರಾ.ಪಂ. ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಂದ ಅಭಿನಂದನೆ

Suddi Udaya

ಪಡ್ಲಾಡಿ 35ನೇ ವರ್ಷದ ಮೊಸರು ಕುಡಿಕೆ ಉತ್ಸವ: ಉಳಿಕೆ ಹಣದಿಂದ ಅಶಕ್ತ ಕುಟುಂಬಗಳಿಗೆ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹದ ಚಿಂತನೆ

Suddi Udaya

ಸುಲ್ಕೇರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya
error: Content is protected !!