32.5 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ನಾರ್ಯ ಚಂದ್ರ ಕುಮಾರ್ ಶೆಟ್ಟಿ ನಿಧನ

ಧರ್ಮಸ್ಥಳ : ಇಲ್ಲಿಯ ನಾರ್ಯ ಕರುಣಾ ನಿವಾಸಿ ಚಂದ್ರ ಕುಮಾರ್ ಶೆಟ್ಟಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಅ. 28 ರಂದು ನಿಧನರಾದರು .

ಇವರು ಸಮಾಜ ಸೇವಕರಾಗಿ, ಕೃಷಿಕರಾಗಿ , ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಸ್ಯರಾಗಿ ಗುರುತಿಸಿಕೊಂಡಿದ್ದರು.

ಚಂದ್ರಣ್ಣ ಕೇವಲ ವ್ಯಕ್ತಿಯಾಗಿರಲಿಲ್ಲ, ಇಡೀ ಊರನ್ನು ಸಲಹುವ ಆಪತ್ಭಾಂದನಾಗಿದ್ದರು. ಸುಮಾರು 25 ವರ್ಷಗಳ ಹಿಂದೆ ಊರಿನಲ್ಲಿ ಒಂದು ಸಣ್ಣ ಕಾರ್ಯಕ್ರಮ ಮಾಡಬೇಕಾದರೂ
ಅದಕ್ಕೆ ಬೇಕಾದ ವ್ಯವಸ್ಥೆಗೆ ಪರವೂರಿನವರ ಮುಂದೆ ಕೈಚಾಚಬೇಕಿತ್ತು. ಜನರ ಆ ಕಷ್ಟವನ್ನು ಕಣ್ಣಾರೆ ಕಂಡು, ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಟ್ಟವರು ಚಂದ್ರಣ್ಣ.
ಯಾರಿಗೆ ಅನಾರೋಗ್ಯ ಬರಲಿ, ಮಧ್ಯರಾತ್ರಿಯೇ ಇರಲಿ, ಆಸ್ಪತ್ರೆಗೆ ಓಡಲು ವಾಹನದ ವ್ಯವಸ್ಥೆ ಮಾಡಿ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದರು. ಚುನಾವಣೆ ಸಮಯ, ಮೇಲು ಕೀಳು ಭೇದವಿಲ್ಲದೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ತನ್ನ ಮನೆಯಲ್ಲೇ ಸುಚಿರುಚಿಯಾದ ಊಟ ಬಡಿಸಿ ಹರಸುತ್ತಿದ್ದರು.
ಸಂಘದ ಯಾವುದೇ ಬೈಠಕ್ ತುರ್ತಾಗಿ ಮಾಡಬಹುದಾಗಿದ್ದ ಮನೆ ಅಂದ್ರೆ ಅದು ಚಂದ್ರಣ್ಣದಾಗಿತ್ತು
ಊರಿನ ಹಬ್ಬ-ಹರಿದಿನಗಳು, ಸ್ವಸಹಾಯ ಸಂಘಗಳು ಒಂದೆಡೆ ಸೇರಿ ಸಭೆ ನಡೆಸಲು ಪುಟ್ಟ ಸಮುದಾಯ ಭವನ ತಲೆಯೆತ್ತಿ ನಿಂತಿದೆ ಎಂದರೆ, ಅದಕ್ಕೆ ಮೂಲ ಕಾರಣಕರ್ತರೇ ಚಂದ್ರಣ್ಣರಾಗಿದ್ದರು.

ಮೃತರು ಪತ್ನಿ ವಿಜಯ ಶೆಟ್ಟಿ, ಪುತ್ರ ರಾಜೇಂದ್ರ ಶೆಟ್ಟಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಕೊಕ್ಕಡ: ಹಳ್ಳಿಂಗೇರಿ ನಿವಾಸಿ ರಾಧಾಕೃಷ್ಣ ನಿಧನ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

Suddi Udaya

ಬೆಳ್ತಂಗಡಿ: ಅಸೌಖ್ಯದಿಂದ ಯುವರಾಜ್ ಪೂಜಾರಿ ನಿಧನ

Suddi Udaya

ಉಜಿರೆ: ದ.ಕ ಜಿಲ್ಲಾ ಮಟ್ಟದ ಶ್ರೀ ಮದ್ಭಗವದ್ಗೀತಾ ಸ್ಪರ್ಧೆಗಳ ಉದ್ಘಾಟನೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ರುದ್ರಭೂಮಿ ಲೋಕಾರ್ಪಣೆ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಕೊಯ್ಲು- ಅಮೃತ ಮಹೋತ್ಸವ: ಕೆ.ಮೋಹನ್ ಕುಮಾರ್ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಶಾಲೆಗೆ ನೀಡಿದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ: ಕೆ. ಮೋಹನ್ ಕುಮಾರ್ ದಂಪತಿಗಳಿಗೆ ಹಾಗೂ ಸುಮಂತ್ ಕುಮಾರ್ ಜೈನ್, ಹರೀಶ್ ಆರಿಕೋಡಿ, ರಕ್ಷಿತ್ ಶಿವರಾಂ ರವರುಗಳಿಗೆ ಸನ್ಮಾನ

Suddi Udaya
error: Content is protected !!