30.8 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾವೂರು ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ರಕ್ಷಿತ್ ನಿರೀಕ್ಷಣಾ ಜಾಮೀನು ಅರ್ಜಿಗೆ ಡಾ . ಪ್ರದೀಪ್ ಪರ ವಕೀಲರುಗಳಿಂದ ಆಕ್ಷೇಪ ಮಂಡನೆ; ನ.4ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಆದೇಶ

ಬೆಳ್ತಂಗಡಿ: ನಾವೂರು ಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರದೀಪ ಎ. ಅವರ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವೂರು ಗ್ರಾಮದ ಬಡಕ್ಕಾವು ಗುತ್ತು ನಿವಾಸಿ ರಕ್ಷಿತ್ ಅವರು ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದಕ್ಕೆ ಪ್ರತಿಯಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾ‌ರ್ ಅ.29ರಂದು ವಾದ ಮಂಡನೆ ಮಾಡಿದ್ದಾರೆ. ರಕ್ಷಿತ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಮೋಹನ್ ಕುಮಾರ್ ಅವರು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಕ್ಷಿತ್ ಬಡೆಕಾವುಗುತ್ತು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲ ಮಯೂರಕೀರ್ತಿ ವಾದ ಮಂಡನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾ, ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಿತ್ ಜೈನ್ ಅವರು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಬಡೆಕ್ಕಾವುಗುತ್ತು ದೈವಸ್ಥಾನದ ಧರ್ಮದರ್ಶಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಡೆಕ್ಕಾವುಗುತ್ತು ಕುಟುಂಬಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಹೆಸರಿದೆ. ಇವರ ವಿರುದ್ಧ ಇದುವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಆ.6ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 009/909೬ರ ಪ್ರಕರಣದಲ್ಲಿ ರಕ್ಷಿತ್ ಅವರನ್ನು ಸುಳ್ಳು ಆರೋಪದ ಮೇಲೆ ಸಿಲುಕಿಸಲಾಗುತ್ತಿದೆ.

ದೂರುದಾರರು ದ್ವೇಷದಿಂದ ಇವರ ಹೆಸರನ್ನು ಪ್ರಸ್ತಾಪಿಸಿದ್ದು ಬಂಧಿತರ ಮೇಲೆ ರಾಜಕೀಯ ಒತ್ತಡ ಹೇರಿ ರಕ್ಷಿತ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಈ ಕೃತ್ಯವನ್ನು ರಕ್ಷಿತ್ ಅವರು ಮಾಡಿಲ್ಲ. ಕೃತ್ಯ ಎಸಗಲು ಯಾರಿಗೂ ಪ್ರಚೋದನೆ ನೀಡಿಲ್ಲ, ಅವರು ಸಂಪೂರ್ಣ ನಿರಪರಾಧಿಯಾಗಿದ್ದಾರೆ. ರಕ್ಷಿತ್ ಅವರು ಕಾನೂನನ್ನು ಗೌರವಿಸುವ ಪ್ರಜೆಯಾಗಿದ್ದು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸಬಹುದೆಂಬ ಆತಂಕವಿದೆ. ಅವರ ಮಾನ-ಪ್ರತಿಷ್ಠೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮಯೂರಕೀರ್ತಿ ತಮ್ಮ ವಾದ ಮಂಡನೆಯಲ್ಲಿ ಒತ್ತಾಯಿಸಿದ್ದಾರೆ. ಇದಕ್ಕೆ ಸಂತ್ರಸ್ತ ಡಾ. ಪ್ರದೀಪ್ ಪರ ವಕೀಲರು ಈಗಾಗಲೇ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದಾರೆ.

ಡಾ. ಪ್ರದೀಪ್ ಪರ ವಾದ ಮಂಡನೆ ಮಾಡಿರುವ ವಕೀಲರಾದ ಬಿ.ಕೆ. ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾ‌ರ್ ಅಗರ್ತ ಮತ್ತು ಜಿನೇಂದ್ರ ಜೈನ್ ಅವರು ಆತಂಕ ಸೃಷ್ಟಿಸುವ ದೊಡ್ಡ ಘಟನೆ ನಾವೂರಿನಲ್ಲಿ ನಡೆದಿದೆ. ಕ್ಲಿನಿಕ್ ನಡೆಸುತ್ತಿರುವ ಡಾ.ಪ್ರದೀಪ್ ಅವರ ಜೀವ ಮತ್ತು ಜೀವನಕ್ಕೆ ಬೆದರಿಕೆ ಇದೆ. ಗಂಭೀರ ಸ್ವರೂಪದ ಅಪರಾಧ ಇದಾಗಿದೆ. ಈ ಕೃತ್ಯದಲ್ಲಿ ರಕ್ಷಿತ್ ಅವರು ನೇರ ಭಾಗಿಯಾಗಿರುವ ಸಂಶಯ ಇದೆ. ಅವರು ಕೃತ್ಯಕ್ಕೆ ಸಂಚು ರೂಪಿಸಿದ ಬಗೆ, ತನಿಖಾಧಿಕಾರಿಗೆ ಸಾಕ್ಷಿ ಲಭ್ಯವಾಗಿದೆ. ಪಬಲ ವ್ಯಕ್ತಿಯಾಗಿರುವ ರಕ್ಷಿತ್ ಅವರು ದೈವ ಮತ್ತು ದೇವರ ಹೆಸರಿನಲ್ಲಿ ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆ ಇದೆ. ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆಯೂ ಇದೆ. ಗಂಭೀರ ಸ್ವರೂಪದ ಘಟನೆಯಲ್ಲಿ ಪಾತ್ರವಾಗಿರುವ ವ್ಯಕ್ತಿಗೆ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ವಾದಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಮಂಗಳೂರು ನ್ಯಾಯಾಲಯದ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಅವರು ನಿರೀಕ್ಷಣಾ ಜಾಮೀನು ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು.


ಅ.29ರಂದು ಸರ್ಕಾರಿ ಅಭಿಯೋಜಕರು ವಾದ ಮಂಡನೆ ಮಾಡಿದ್ದು ಕೃತ್ಯದ ಹಿಂದೆ ರಕ್ಷಿತ್ ಅವರ ಪಾತ್ರ ಇರುವುದಕ್ಕೆ ತನಿಖಾಧಿಕಾರಿಯವರಲ್ಲಿ ಸಾಕ್ಷ್ಯಾಧಾರಗಳಿದೆ. ಅವರಿಗೆ ಈ ಹಂತದಲ್ಲಿ ಜಾಮೀನು ಮಂಜೂರು ಮಾಡಿದರೆ ಸಾಕ್ಷಿದಾರರಿಗೆ ಒತ್ತಡ ಹೇರುವ ಸಾಧ್ಯತೆ ಇದೆ ಮತ್ತು ಸಾಕ್ಷಿ ನಾಶ ಮಾಡುವಂತಹ ಪ್ರಭಾವಿಯಾಗಿದ್ದಾರೆ. ಹಾಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಮೂರೂ ಕಡೆಯ ವಕೀಲದ ವಾದ ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ನವೆಂಬರ್ 4ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾವೂರಿನ ರವಿ ಪೂಜಾರಿ, ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಎಂಬವರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Related posts

ಹಲವಾರು ಶವಗಳನ್ನು ಹೂತಿದ್ದೆ ಎಂಬ ದೂರು ಪ್ರಕರಣ: ಎಸ್.ಐ.ಟಿ. ತನಿಖಾ ತಂಡದಿಂದ ಸತ್ಯಾಂಶ ಅತಿ ಶೀಘ್ರವಾಗಿ ಬಹಿರಂಗ ಪಡಿಸಲಿ: ಕೆ. ಪಾರ್ಶ್ವನಾಥ್ ಜೈನ್

Suddi Udaya

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸನತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ

Suddi Udaya

ಎ.25: ನಿವೃತ್ತ ಸರಕಾರಿ ನೌಕರರ ಸಂಘದ ರಜತ ಸಂಭ್ರಮ- ರೂ.40 ಲಕ್ಷ ವೆಚ್ಚದಲ್ಲಿ ಅಚ್ಚಿನಡ್ಕ ಕೆಲ್ಲಗುತ್ತು ನಲ್ಲಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ‘ಪ್ರಬುದ್ಧ’ ಉದ್ಘಾಟನೆ

Suddi Udaya

ಎಕ್ಸೆಲ್ ಕಾಲೇಜಿನ ಸಿ.ಎ ಮತ್ತು ಸಿ.ಎಸ್ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya
error: Content is protected !!