ಉಜಿರೆ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2026ರ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಕ್ರೊಟ್ಟು ಮನೆ ನಿಶಾನ್ಯ ಎಚ್. ಪೂಜಾರಿ ಅವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಭರತನಾಟ್ಯ ತರಬೇತಿಯನ್ನು ವಿದುಷಿ ಸ್ವಾತಿ ಜಯರಾಮ್ ಹಾಗೂ ವಿದುಷಿ ಪೃಥ್ವಿ ಸತೀಶ್‌ರವರಿಂದ ತರಬೇತಿ ಪಡೆದಿರುತ್ತಾರೆ. ನಿಶಾನ್ಯ ಎಚ್ ಪೂಜಾರಿ ಅವರು ಉಜಿರೆಯ ಹರೀಶ್ ಕುಮಾರ್ ಬರಮೇಲು ಮತ್ತು ಶ್ರೀಮತಿ ಯಾದವಿ ದಂಪತಿಯ ಪುತ್ರಿ. ಉಜಿರೆ ಕಾಶಿಬೆಟ್ಟು ಪ್ರಗತಿನಗರ ಅಭ್ಯಾಸ್ ಪದವಿ ಪೂರ್ವ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.












