32.5 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೀಪಾವಳಿ ಹಬ್ಬಕ್ಕೆ ಬೆಳ್ತಂಗಡಿ ಲೋಬೊ ಮೋಟಾರ್ಸ್ನಲ್ಲಿ ವಿಶೇಷ ಆಫರ್; ಕಡಿಮೆ ಮುಂಗಡ ಪಾವತಿ, ಶೇ.0 ಬಡ್ಡಿ ಸೇರಿದಂತೆ ಆಕರ್ಷಕ ಕೊಡುಗೆಗಳು

ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ಸಂತೆಕಟ್ಟೆ ಹಾಗೂ ಮಡಂತ್ಯಾರು ಕಾಲೇಜು ರಸ್ತೆಯ ಸೋಜಾ ಕಾಂಪ್ಲೆಕ್ಸ್ನಲ್ಲಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಲೋಬೊ ಮೋಟಾರ್ಸ್ನಲ್ಲಿ ಗ್ರಾಹಕರಿಗಾಗಿ ವಿಶೇಷ ಹಬ್ಬದ ಆಫರ್‌ಗಳನ್ನು ಘೋಷಿಸಲಾಗಿದೆ.

ಟಿವಿಎಸ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಖರೀದಿಗೆ ಆಕರ್ಷಕ ಕೊಡುಗೆಗಳು ಲಭ್ಯವಿವೆ. ಆಯ್ದ ವಾಹನಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಕೇವಲ ರೂ. 3999ರಿಂದ ಮುಂಗಡ ಪಾವತಿ ಹಾಗೂ ಶೇ.0% ಬಡ್ಡಿದರದಲ್ಲಿ ವಾಹನ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ಗ್ರಾಹಕರ ವಾಹನಗಳಿಗೆ ಹೊಸ ವಿಮೆ ಹಾಗೂ ವಿಮೆ ನವೀಕರಣವನ್ನು ಕೈಗೆಟುಕುವ ದರದಲ್ಲಿ ಮಾಡಿಸಿಕೊಳ್ಳುವ ಸೌಲಭ್ಯವೂ ಇದೆ. ಹಬ್ಬದ ವಿಶೇಷ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ಸಮೀಪದ ಲೋಬೊ ಮೋಟಾರ್ಸ್ ಶೋರೂಂಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಾಹನ ಖರೀದಿಗೆ ಆಕರ್ಷಕ ಉಚಿತ ಕೊಡುಗೆಗಳು
ಲೋಬೊ ಮೋಟಾರ್ಸ್ನಲ್ಲಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಹಲವು ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಉಚಿತ ಹೆಲ್ಮೆಟ್, ಉಚಿತ ಪೆಟ್ರೋಲ್, ಉಚಿತ ಬಾಡಿ ಕವರ್, ಐದು ವರ್ಷಗಳ ಉಚಿತ ಎಂಜಿನ್ ವಾರಂಟಿ, ರೂ. 15 ಲಕ್ಷದ ಉಚಿತ ರೈಡರ್ ವಿಮೆ, ರೋಡ್‌ಸೈಡ್ ಅಸಿಸ್ಟೆನ್ಸ್, ಉಚಿತ ಟ್ರಾವೆಲ್ ಬ್ಯಾಗ್, ಶೇ. 0% ಬಡ್ಡಿದರದ ಸೌಲಭ್ಯ ಹಾಗೂ ರೂ. 3000 ಎಕ್ಸ್ಚೇಂಜ್ ಬೋನಸ್ ಪ್ರಮುಖ ಆಕರ್ಷಣೆಗಳಾಗಿವೆ.

ಗ್ರಾಹಕರ ಸಂತೃಪ್ತಿಗೆ ಮೊದಲ ಆದ್ಯತೆ: ರೊನಾಲ್ಡೊ ಲೋಬೊ
ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಾ ಬಂದಿದ್ದೇವೆ. ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಅನುಕೂಲವಾಗುವಂತೆ ವಿಶೇಷ ಕೊಡುಗೆಗಳನ್ನು ಪರಿಚಯಿಸಿದ್ದೇವೆ. ಗ್ರಾಹಕರ ಸಂತೃಪ್ತಿಯೇ ನಮ್ಮ ಮೊದಲ ಆದ್ಯತೆ. ವಾಹನ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ಆಕರ್ಷಕ ಆಫರ್‌ಗಳನ್ನು ನೀಡಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟಿವಿಎಸ್ ಲೋಬೊ ಮೋಟಾರ್ಸ್ನ ಮಾಲಕ ರೊನಾಲ್ಡೊ ಲೋಬೊ ತಿಳಿಸಿದ್ದಾರೆ.

Related posts

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 12 ವರ್ಷ : ಲಾಯಿಲ ಶಕ್ತಿಕೇಂದ್ರ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಜಿನಭಜನಾ ಸ್ಪರ್ಧೆ :ಮಂಗಳೂರು ವಲಯ ಮಟ್ಟದಲ್ಲಿ ಅಳದಂಗಡಿ ತಂಡ ತೃತೀಯ ಸ್ಥಾನ

Suddi Udaya

ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಯ ಕಾಮಗಾರಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಜಂಟಿ ವೀಕ್ಷಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಸಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ನಿಧನ

Suddi Udaya
error: Content is protected !!