ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ನಡೆಸುವ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ಮಾಧವಿ ಎನ್. ಎಸ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸುಮಾರು 16 ವರ್ಷಗಳ ಭರತನಾಟ್ಯ ಕಲೋಪಾಸನೆಯಲ್ಲಿ “ವಿದುಷಿ” ಪದವಿಯನ್ನು ಪಡೆದದ್ದು ಮಹತ್ವದ ಮೈಲಿಗಲ್ಲಾಗಿದೆ. ಇವರು ನಿನ್ನಿಕಲ್ಲು ನಿವಾಸಿ ದಿ| ಎನ್. ಸಂಜೀವ ಹಾಗೂ ಶ್ರೀಮತಿ ಸುಶೀಲ. ಎಸ್ ದಂಪತಿಯ ಪುತ್ರಿಯಾಗಿದ್ದು, ತಮ್ಮ ಭರತನಾಟ್ಯ ಕಲಿಕೆಯನ್ನು ದೇವಿಕಿರಣ್ ಕಲಾನಿಕೇತನ, ಮಡಂತ್ಯಾರು ಇದರ ಉಜಿರೆ ಶಾಖೆಯ ನೃತ್ಯಸಂಸ್ಥೆಯಲ್ಲಿ ಗುರು ವಿದುಷಿ ಶ್ರೀಮತಿ ಸ್ವಾತಿ ಜಯರಾಮ್ ಹಾಗೂ ಗುರು ವಿದುಷಿ ಶ್ರೀಮತಿ ಪ್ರಥ್ವಿ ಸತೀಶ್ ಅವರ ಮಾರ್ಗದರ್ಶನದಲ್ಲಿ ನಿರಂತರ ಸಾಧನೆ ಮಾಡುತ್ತಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಅಧ್ಯಯನ ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮೂಡಬಿದಿರೆ ಇಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.











