ಬೆಳ್ತಂಗಡಿ: ಸೌಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡದ ಅಧಿಕಾರಿಗಳು ಅ.31 ರಂದು ಶನಿವಾರ ಧರ್ಮಸ್ಥಳ ಗ್ರಾಮದ ಮಣ್ಣಸಂಕದ ಸಮೀಪ ಸೌಜನ್ಯ ನಾಪತ್ತೆಯಾದ ಸ್ಥಳ ಹಾಗೂ ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಐ.ಟಿ ತನಿಖಾಧಿಕಾರಿ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್, ಎಸಿಪಿ ಮನೋಜ್ ಕುಮಾರ್ ಸೇರಿದಂತೆ ಬೆಂಗಳೂರು ಎಫ್. ಎಸ್. ಎಲ್ ತಂಡ, ಸೋಕೋ ತಂಡ, ವೈದ್ಯರ ತಂಡ, ಗ್ರಾಮ ಆಡಳಿತಾಧಿಕಾರಿ, ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಅಧಿಕಾರಿಗಳು ಶವ ಪತ್ತೆಯಾದ ಜಾಗಕ್ಕೆ ತೆರಳಿ ಮಹಜರು ನಡೆಸುತ್ತಿದ್ದಾರೆ.
ಅಂದು ಸೌಜನ್ಯ ಶವ ಸಿಕ್ಕಾಗ ದೂರು ನೀಡಿದ್ದ ಸೌಜನ್ಯ ಮಾವ ಪುರಂದರ ಗೌಡ ಹಾಗೂ ಪಂಚರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











