ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.31ರಂದು ನಡೆದ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಒಟ್ಟು 19 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
1ರಿಂದ 4ನೇ ತರಗತಿಯ ವಿಭಾಗದಲ್ಲಿ: ಕನ್ನಡ ಕಂಠಪಾಠ – ಕ್ಷಮಾ (4ನೇ ತರಗತಿ) – ದ್ವಿತೀಯ ಸ್ಥಾನ, ಧಾರ್ಮಿಕ ಪಠಣ (ಸಂಸ್ಕೃತ) – ಸ್ತುತಿ (4ನೇ ತರಗತಿ) – ಪ್ರಥಮ ಸ್ಥಾನ, ಭಕ್ತಿಗೀತೆ – ಶ್ರೀಶ (3ನೇ ತರಗತಿ) – ಪ್ರಥಮ ಸ್ಥಾನ, ದೇಶಭಕ್ತಿ ಗೀತೆ – ಮಾನ್ವಿ ಪಿ. ವೈ. (4ನೇ ತರಗತಿ) – ಪ್ರಥಮ ಸ್ಥಾನ, ಛದ್ಮವೇಷ – ಮಯೂರ್ ಭಟ್ (2ನೇ ತರಗತಿ) – ತೃತೀಯ ಸ್ಥಾನ, ಚಿತ್ರಕಲೆ – ನಿಹಾಲ್ ಆಚಾರಿ (4ನೇ ತರಗತಿ) – ಪ್ರಥಮ ಸ್ಥಾನ, ಕ್ಲೇ ಮಾಡೆಲಿಂಗ್ – ಶಿಖಿನ್ (4ನೇ ತರಗತಿ) – ದ್ವಿತೀಯ ಸ್ಥಾನ, ಕಥೆ ಹೇಳುವುದು – ರಚಿತ (4ನೇ ತರಗತಿ) – ದ್ವಿತೀಯ ಸ್ಥಾನ, ಆಶುಭಾಷಣ – ಅನ್ವಿತ (4ನೇ ತರಗತಿ) – ದ್ವಿತೀಯ ಸ್ಥಾನ ಪಡೆದಿದ್ದಾರೆ.
5ರಿಂದ 7ನೇ ತರಗತಿಯ ವಿಭಾಗದಲ್ಲಿ: ಇಂಗ್ಲಿಷ್ ಕಂಠಪಾಠ – ಲಿಪಿ (7ನೇ ತರಗತಿ) – ದ್ವಿತೀಯ ಸ್ಥಾನ, ಹಿಂದಿ ಕಂಠಪಾಠ – ಅದಿತಿ (7ನೇ ತರಗತಿ) – ಪ್ರಥಮ ಸ್ಥಾನ, ಧಾರ್ಮಿಕ ಪಠಣ (ಸಂಸ್ಕೃತ) – ಸ್ಕಂದನ (6ನೇ ತರಗತಿ) – ಪ್ರಥಮ ಸ್ಥಾನ, ಧಾರ್ಮಿಕ ಪಠಣ (ಅರೇಬಿಕ್) – ಮೊಹಮ್ಮದ್ ನಿಹಾಲ್ (6ನೇ ತರಗತಿ) – ದ್ವಿತೀಯ ಸ್ಥಾನ, ದೇಶಭಕ್ತಿ ಗೀತೆ – ನಿಶಿಕ (6ನೇ ತರಗತಿ) – ಪ್ರಥಮ ಸ್ಥಾನ, ಭಕ್ತಿಗೀತೆ – ಅನ್ವಿರಾಜ್ (6ನೇ ತರಗತಿ) – ದ್ವಿತೀಯ ಸ್ಥಾನ, ಆಶುಭಾಷಣ – ಸುರಾನಿ (6ನೇ ತರಗತಿ) – ತೃತೀಯ ಸ್ಥಾನ, ಕಥೆ ಹೇಳುವುದು – ಮಾನ್ವಿ ಭಟ್ (6ನೇ ತರಗತಿ) – ತೃತೀಯ ಸ್ಥಾನ, ಕವನ ವಾಚನ – ಆದ್ವಿ (6ನೇ ತರಗತಿ) – ಪ್ರಥಮ ಸ್ಥಾನ, ಮಿಮಿಕ್ರಿ – ಸುಮಂತ್ (7ನೇ ತರಗತಿ) – ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ಎನ್. ನಾಯಕ್ ಅವರು ವಿಜೇತ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಮಾರ್ಗದರ್ಶನ ನೀಡಿ ತರಬೇತಿ ನೀಡಿದ ಶಿಕ್ಷಕ ವೃಂದವನ್ನು ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ಗಳಿಸುವಂತೆ ಶುಭ ಹಾರೈಸಿದರು.











