ನೆರಿಯ: ಗಂಡಿಬಾಗಿಲು ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ ನ.1ರಂದು ‘ಕನ್ನಡ ರಾಜ್ಯೋತ್ಸವ’ವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ.ಯವರು ನೆರವೇರಿಸಿ ಶುಭ ಹಾರೈಸಿದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಡಾ. ಯು.ಸಿ ಪೌಲೋಸ್ ಶುಭ ಹಾರೈಸಿ, “ಕನ್ನಡ ಕೇವಲ ಭಾಷೆಯಲ್ಲ, ಕನ್ನಡ ನಮ್ಮ ಭಾವನೆ, ಸಂಸ್ಕೃತಿ, ನಮ್ಮ ಪರಂಪರೆಯ ಪ್ರತೀಕವಾಗಿದೆ. ಕನ್ನಡದ ಸಾಹಿತ್ಯ, ಕಲೆ ಮತ್ತು ಕನ್ನಡಿಗರ ಪ್ರೀತಿ, ಮಮತೆ ಇಡೀ ಜಗತ್ತಿನಲ್ಲಿಯೇ ವಿಶಿಷ್ಟವಾದುದು. ನಾವೆಲ್ಲರೂ ಐಕ್ಯತೆಯಿಂದ ಕನ್ನಡಾಂಬೆಯ ಮಡಿಲಲ್ಲಿ ಜಾತಿ, ಮತ ಭೇದ-ಭಾವವಿಲ್ಲದೆ ಸಹೋದರತ್ವದಿಂದ ಬಾಳೋಣ. ಕನ್ನಡಾಂಬೆಯ ನೆಲದಲ್ಲಿ ಹವಾಮಾನಕ್ಕೆ ತಕ್ಕಂತೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬೆಳೆದು ನಾಡು ಸುಭಿಕ್ಷವಾಗಲಿ. ಕರ್ನಾಟಕದ ಎಲ್ಲಾ ರಾಜಕಾರಣಿಗಳು ನ್ಯಾಯಸಮ್ಮತ ಹಾಗೂ ಜನಪರ ಆಡಳಿತವನ್ನು ನೀಡುವ ಮೂಲಕ ರಾಜ್ಯದ ಜನರ ನೆಮ್ಮದಿ, ಸಮೃದ್ಧಿ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ” ಎಂದು ಆಶಿಸಿದರು.
ಸಿಯೋನ್ ಚಾಪ್ಲಿಯನ್ ರೆ.ಫಾ.ಡಾ.ಮೆಲ್ವಿನ್ ಡಿ’ಸಿಲ್ವ, ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಮತ್ತು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.











