November 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಸಂವಾದ  

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನ.2ರಂದು ಡಾ|| ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ‘ಶೌರ್ಯ’ ಸ್ವಯಂಸೇವಕರು ವಿವಿಧ ಸಂದರ್ಭಗಳಲ್ಲಿ ಕೈಗೊಂಡ ವಿಪತ್ತು ನಿರ್ವಹಣಾ ಕಾರ್ಯಗಳು, ಸಮಾಜಮುಖಿ ಸೇವೆಗಳು ಹಾಗೂ ತಮ್ಮ ಅನುಭವಗಳನ್ನು ಪೂಜ್ಯರೊಂದಿಗೆ ಹಂಚಿಕೊಂಡರು. ಸ್ವಯಂಸೇವಕರ ಸೇವಾ ಬದ್ಧತೆ ಮತ್ತು ಸಮಾಜದ ಸಂಕಷ್ಟದ ಸಮಯದಲ್ಲಿ ತೋರಿದ ಮಾನವೀಯ ಕಾಳಜಿಯನ್ನು ಆಲಿಸಿದ ಪೂಜ್ಯರು, ಅವರ ಕಾರ್ಯಗಳನ್ನು ಪ್ರಶಂಸಿಸಿ ಆಶೀರ್ವಾದಪೂರ್ವಕ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಯೋಜನೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮವನ್ನು ಆರಂಭಿಸಿದ ಆಶಯ, ಅದರ ಸಾಮಾಜಿಕ ಮಹತ್ವ ಹಾಗೂ ಕಳೆದ ವರ್ಷಗಳಲ್ಲಿ ಕಾರ್ಯಕ್ರಮ ಸಾಧಿಸಿರುವ ಯಶಸ್ಸಿನ ಕುರಿತು ಮಾಹಿತಿ ನೀಡಿದರು. ವಿಪತ್ತಿನ ಸಂದರ್ಭದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರ ಕಾರ್ಯವನ್ನು ಶ್ಲಾಘಿಸಿದರು.

ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನ, ಸೇವಾ ಸಾಧನೆಗಳು, ಕಾರ್ಯವ್ಯಾಪ್ತಿ, ವಿವಿಧ ಇಲಾಖೆಗಳ ಸಹಕಾರ ಹಾಗೂ ಸ್ವಯಂಸೇವಕರು ಸಲ್ಲಿಸಿದ ಅಮೂಲ್ಯ ಸೇವೆಗಳ ಕುರಿತು ವಿವರಿಸಿದರು.

2020ರಿಂದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 29 ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರು ತಮ್ಮ ಘಟಕಗಳ ಮೂಲಕ ಕೈಗೊಂಡ ರಕ್ಷಣಾ ಕಾರ್ಯಗಳು, ವಿಪತ್ತು ನಿರ್ವಹಣಾ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಗಳ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು ಮತ್ತು ಪಡೆದ ಅನುಭವಗಳನ್ನು ಪೂಜ್ಯರೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಾ. ಹರೀಶ್ ಕೃಷ್ಣ ಸ್ವಾಮಿ ಗೌರವ ಉಪಸ್ಥಿತರಿದ್ದರು.

ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಿ. ಜಯರಾಮ್, ಸೋಶಿಯಲ್ ಮೀಡಿಯಾ ವಿಭಾಗದ ನಿರ್ದೇಶಕ ಪ್ರದೀಪ್ ಶೆಟ್ಟಿ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್ ಹಾಗೂ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Related posts

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ

Suddi Udaya

ಬಂದಾರು : ಮೈರೋಳ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ

Suddi Udaya

ಕಳಿಯ ಪರಪ್ಪು ಬಸ್ಸು ನಿಲ್ದಾಣದ ರಸ್ತೆ ಬದಿಯಲ್ಲಿ ಸತ್ತ ದನವನ್ನು ಎಸೆದು ಹೋದ ಅಕ್ರಮ ದನ ಕಳ್ಳ ಸಾಗಾಟಗಾರರು

Suddi Udaya

ಉಜಿರೆ ಗುರಿಪಳ್ಳ -ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

Suddi Udaya

ಕಣಿಯೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸರಸ್ವತಿ ಹೃದಯಾಘಾತದಿಂದ ನಿಧನ

Suddi Udaya

ದ.ಕ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘ ರಚನೆ

Suddi Udaya
error: Content is protected !!