November 5, 2026
ಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಮಟ್ಟದ “ಗೌಡರ ಗೌಜಿ ಗಮ್ಮತ್ – ತುಳು ಸಾಂಸ್ಕೃತಿಕ ಪರ್ಬ-2026”-ಪೂರ್ವಭಾವಿ ಆಯೋಜನಾ ಸಭೆ

ಬೆಳ್ತಂಗಡಿ: ತಾಲೂಕು ಮಟ್ಟದ “ಗೌಡರ ಗೌಜಿ ಗಮ್ಮತ್ – ತುಳು ಸಾಂಸ್ಕೃತಿಕ ಪರ್ಬ-2026” ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಯಶಸ್ವಿ ಆಯೋಜನೆಗಾಗಿ ಉಜಿರೆಯ ಒಷಿಯನ್ ಪರ್ಲ್‌ನಲ್ಲಿ ಪೂರ್ವಭಾವಿ ಆಯೋಜನಾ ಸಭೆಯನ್ನು ನಡೆಸಲಾಯಿತು. 

ಅಧ್ಯಕ್ಷ ಚಂದ್ರಕಾಂತ್ ನಿಡ್ಡಜೆ ಹಾಗೂ ಧರ್ಮೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆಕೋಟೆ ಬೆಳ್ತಂಗಡಿ, ವಾಣಿ ಸೌಹಾರ್ದ, ಸ್ಪಂದನಾ ಸೇವಾ ಸಂಘ ಹಾಗೂ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ರೂಪು-ರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದರು. 

ಸಭೆಯಲ್ಲಿ ಕಾರ್ಯದರ್ಶಿ ಸುರೇಶ್ ಕೌಡಂಗೆ, ಪ್ರದೀಪ್ ಗೌಡ ನಾಗಾಜೆ ಹಾಗೂ ಗೌರವ ಅಧ್ಯಕ್ಷರಾದ ಯಶವಂತ್ ಬೆಳಾಲು ಹಾಗೂ ಪ್ರಮೋದ್ ದಿಡುಪೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಮುಂಬರುವ ನ.22 ರಂದು ನಡೆಯಲಿರುವ ಈ ಮಹಾಸಂಭ್ರಮವನ್ನು ಅತ್ಯಂತ ವೈಭವದಿಂದ ನಡೆಸಲು ಚರ್ಚಿಸಿ ನಿರ್ಧರಿಸಲಾಯಿತು. 

Related posts

ಗುರುವಾಯನಕೆರೆಯಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡು ಆರಂಭಗೊಂಡ ಹೋಟೇಲ್ ಮಥುರಾ ಉದ್ಘಾಟನೆ

Suddi Udaya

ಧರ್ಮಸ್ಥಳ: ಉಚಿತ ಸಾಮೂಹಿಕ ವಿವಾಹದ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ಸರಕಾರಿ ಪ. ಪೂ. ಕಾಲೇಜಿನಲ್ಲಿ “ಮಳೆ ನೀರು ಕೊಯ್ಲು ಹಾಗೂ ಮರುಪೂರಣ ಇದರ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಿಡ್ಲೆ ಸಹಕಾರಿ ಸಂಘದ ಅಧ್ಯಕ್ಷ ಕೆ. ರಮೇಶ್ ರಾವ್ ಬೆಂಬಲ

Suddi Udaya

ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಕೇಸ್‌ ದಾಖಲು

Suddi Udaya

ಪುಂಜಾಲಕಟ್ಟೆ ಬಿ. ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್‌ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್

Suddi Udaya
error: Content is protected !!