
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ.), ಗುರುವಾಯನಕೆರೆ
ಇದರ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಯಾದವ ಮೂಲ್ಯ ಮುಂಡೂರು ಹಾಗೂ ಕಾರ್ಯದರ್ಶಿಯಾಗಿ ತಿಲಕ್‌ರಾಜ್ ಕುಲಾಲ್ ಕೋಡಿಬೈಲು ಅವರು ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಹರೀಶ್ ಕಾರಿಂಜ, ಉಪಾಧ್ಯಕ್ಷರುಗಳಾಗಿ ಲೋಕೇಶ್ ಕುಲಾಲ್ ಕಂಚಿಂಜ ಹಾಗೂ ಸಾಂತಪ್ಪ ಮೂಲ್ಯ ಕಳಿಕ, ಕೋಶಾಧಿಕಾರಿಯಾಗಿ ಯತೀಶ್ ಸಿರಿಮಜಲು, ಜೊತೆ ಕಾರ್ಯದರ್ಶಿಗಳಾಗಿ ಪದ್ಮನಾಭ ಕುಲಾಲ್ ಅಳದಂಗಡಿ ಹಾಗೂ ಶ್ರೀಮತಿ ಹಿಮಪ್ರಭಾ, ಸಂಘಟನಾ ಕಾರ್ಯದರ್ಶಿಯಾಗಿ ಉದಯ ಬಿ.ಕೆ. ಬಂದಾರು, ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ
ಸುಧೀರ್ ಕೆ.ಎನ್. ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ನಾಣ್ಯಪ್ಪ ಮೂಲ್ಯ ಬಳ್ಳಮಂಜ, ದಿನೇಶ್ ಕುಲಾಲ್ ಕೊಂಡೇಮಾರು, ಡೀಕಯ್ಯ ಕುಲಾಲ್ ಬಳೆಂಜ, ಹೊನ್ನಯ್ಯ ಮೂಲ್ಯ,
ಶ್ರೀಮತಿ ವಸಂತಿ ಲಕ್ಷ್ಮಣ ಇವರನ್ನು ಆಯ್ಕೆ ಮಾಡಲಾಗಿದೆ.














