November 7, 2026
ಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಅದ್ಧೂರಿಯಾಗಿ ಅನಾವರಣಗೊಂಡ ಕಲಿಕಾ ಹಬ್ಬ ‘ಅನ್ವೇಷಣಾ 2026′

ಎಕ್ಸೆಲ್ ಟೆಕ್ನೋ ಸ್ಕೂಲ್ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ:ವಾಲ್ಟರ್ ಡಿಸೋಜಾ ನಂದಳಿಕೆ

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಪುಸ್ತಕದ ಕಲಿಕೆಯೊಂದಿಗೆ ಕೌಶಲಾಧಾರಿತ ಕಲಿಕೆ ಅತ್ಯಗತ್ಯ: ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ಎಕ್ಸೆಲ್ ಟೆಕ್ನೋ ಸ್ಕೂಲ್, ಗುರುವಾಯನಕೆರೆ ವತಿಯಿಂದ ಆಯೋಜಿಸಲಾದ ಕಲಿಕಾ ಹಬ್ಬ ಅನ್ವೇಷಣಾ 2026 ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವೈವಿಧ್ಯಮಯ ಚಟುವಟಿಕೆಗಳೊಂದಿಗೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ವಾಲ್ಟರ್ ಡಿಸೋಜಾ ನಂದಳಿಕೆ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ., ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಪ್ರಾಂಶುಪಾಲರಾದ ಸುಮಿತ್ರಾ ಗೌಡ ಹಾಗೂ ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಂಟಿಯಾಗಿ ನಿರ್ಮಿಸಿದ ವಿಶಿಷ್ಟ ಮಾದರಿಯ ದ್ವಾರವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೀಪ ಬೆಳಗಿಸುವುದರ ಜೊತೆಗೆ ರೋಬೋಟ್ ಚಾಲನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿದ್ದು, ಕಾರ್ಯಕ್ರಮಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿತು.

ಉದ್ಘಾಟನಾ ಭಾಷಣ ಮಾಡಿದ ವಾಲ್ಟರ್ ಡಿಸೋಜಾ ನಂದಳಿಕೆ ಅವರು, ಇಂತಹ ವಿಶಿಷ್ಟ ಕಲಿಕಾ ಹಬ್ಬಗಳು ಶಾಲೆಗಳಲ್ಲಿ ಅಪರೂಪ. ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಜೀವನ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್ ಮಾಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ. ಅವರು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಪುಸ್ತಕದ ಕಲಿಕೆಯೊಂದಿಗೆ ಪ್ರಾಯೋಗಿಕ ಅನುಭವ, ಸೃಜನಶೀಲತೆ ಹಾಗೂ ಕೌಶಲಾಧಾರಿತ ಕಲಿಕೆ ಅತ್ಯಗತ್ಯ. ಈ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕಲಿಕಾ ಹಬ್ಬದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳೇ ನಿರ್ಮಿಸಿದ ರೋಬೋಟಿಕ್ಸ್ ಮಾದರಿಗಳ ಮೂಲಕ ನಡೆದ ರೋಬೋ ವಾರ್ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಬಾಟಲ್ ರಾಕೆಟ್ ಪ್ರದರ್ಶನ, ವಿವಿಧ ಗಣಿತ ಮತ್ತು ವಿಜ್ಞಾನ ಮಾದರಿಗಳು, ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷೆಗಳ ಸಂಗಮ, ಸಮಾಜ ವಿಜ್ಞಾನದ ವಿನೂತನ ಮಾದರಿಗಳು, ಕಲಾ ಮತ್ತು ಕರಕುಶಲ ಪ್ರದರ್ಶನಗಳು ಸೇರಿದಂತೆ ಅನೇಕ ವೈವಿಧ್ಯಮಯ ಕಲಿಕಾ ಮಳಿಗೆಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು.

ವಿಶೇಷವಾಗಿ ಒಂದನೇ ತರಗತಿಯಿಂದಲೇ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಿಕಾ ಸಾಮರ್ಥ್ಯ, ಸೃಜನಶೀಲತೆ ಹಾಗೂ ಪ್ರಾಯೋಗಿಕ ಕೌಶಲಗಳನ್ನು ಅನಾವರಣಗೊಳಿಸಿದ್ದು ಗಮನಾರ್ಹವಾಗಿತ್ತು. ಪುಟ್ಟ ಮಕ್ಕಳೇ ಸಿದ್ಧಪಡಿಸಿದ ಮಾದರಿಗಳು ಮತ್ತು ಅವುಗಳನ್ನು ಆತ್ಮವಿಶ್ವಾಸದಿಂದ ವಿವರಿಸಿದ ರೀತಿಯನ್ನು ಕಂಡು ಪೋಷಕರು ಹಾಗೂ ಆಗಮಿಸಿದ ಅತಿಥಿಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಂಶುಪಾಲರಾದ ಸುಮಿತ್ರಾ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಾಲೆಯ ಶಿಕ್ಷಕರಾದ ಚಂದ್ರಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಅನ್ವೇಷಣಾ 2026 ಕೇವಲ ಒಂದು ಪ್ರದರ್ಶನವಾಗಿರದೆ, ವಿದ್ಯಾರ್ಥಿಗಳ ಕಲ್ಪನೆಗೆ ರೆಕ್ಕೆ ನೀಡಿ, ಕಲಿಕೆಯನ್ನು ಅನುಭವವಾಗಿ ಪರಿವರ್ತಿಸಿದ ಸೃಜನಶೀಲ ವೇದಿಕೆಯಾಗಿ ಮೂಡಿಬಂದಿತು.

Related posts

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಯಶಸ್ವಿ ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

Suddi Udaya

ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿಗಳಿಂದ ವನ ಮಹೋತ್ಸವ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ – ಶಾಲಾ ಅಭಿವೃದ್ಧಿ ಸಮಿತಿ ರಚನೆ

Suddi Udaya

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Suddi Udaya

ಕಳೆಂಜ: ಪಿಲ್ಯಡ್ಕದಲ್ಲಿ ಮತ್ತೆ ಕಾಡಾನೆಗಳ ದಾಳಿ : ಬಾಳೆ ಗಿಡ, ಅಡಿಕೆ ಕೃಷಿ ನಾಶ

Suddi Udaya

ಗುರುವಾಯನಕೆರೆಯಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡು ಆರಂಭಗೊಂಡ ಹೋಟೇಲ್ ಮಥುರಾ ಉದ್ಘಾಟನೆ

Suddi Udaya
error: Content is protected !!