November 7, 2026
Uncategorized

ಬೆಳ್ತಂಗಡಿ ತಾಲ್ಲೂಕು ರಾಜ್ಯಸರ್ಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆ : ಸಾಧಕರ ಸನ್ಮಾನ ಮತ್ತು ಹಿರಿಯ ನಾಗರಿಕರಿಗೆ ಅಭಿನಂದನೆ

ಬೆಳ್ತಂಗಡಿ : ಬೆಳ್ತಂಗಡಿ ತಾಲ್ಲೂಕು ರಾಜ್ಯಸರ್ಕಾರಿ ನಿವೃತ್ತನೌಕರರ ಮತ್ತು ಹಿರಿಯನಾಗರಿಕರ ಸೇವಾಸಂಸ್ಥೆಯ ಆಶ್ರಯದಲ್ಲಿ ಸಾಧಕರ ಸನ್ಮಾನ ಮತ್ತು ಹಿರಿಯ ನಾಗರಿಕರಿಗೆ ಅಭಿನಂದನಾ ಸಮಾರಂಭಮ ಸಂಘದ ಅಧ್ಯಕ್ಷರಾದ ಬಿ. ವಿಠಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನ.೭ ಶನಿವಾರ ಬೆಳ್ತಂಗಡಿಯಲ್ಲಿ ಕೆಲ್ಲಗುತ್ತು ಬಳಿ ಇರುವ ಪ್ರಬುದ್ಧ ಸಭಾಭವನದಲ್ಲಿನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು ಶುಭಾಶಂಸನೆ ಮಾಡಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯರು ಪರಿಪಕ್ವವಾದ ಪ್ರಬುದ್ಧ ಅನುಭವ ಹೊಂದಿದ್ದು ಸಮಾಜದಲ್ಲಿ ಕಿರಿಯರಿಗೆ ಅವರ ಸಕಾಲಿಕ ಮಾಹಿತಿ, ಮಾರ್ಗದರ್ಶನ ಅಗತ್ಯವಾಗಿದೆ. ಜೀವನಾನುಭವವೇ ಅಮೂಲ್ಯ ಸಂಪತ್ತು ಆಗಿದೆ ಎಂದು ಹೇಳಿದರು. ಶಿಸ್ತು, ಬದ್ಧತೆ ಮತ್ತು ಶ್ರದ್ಧೆಯೊಂದಿಗೆ ಮಾನವೀಯತೆಯಿಂದ ಮಾಡಿದ ನಿಸ್ವಾರ್ಥ ಸೇವೆಯನ್ನು ಎಲ್ಲಾ ಸಮಾಜಬಾಂಧವರು ಗುರುತಿಸಿ ಗೌರವಿಸುತ್ತಾರೆ. ಅಪಾರ ಅನುಭವದ ಸಂಪತ್ತಿಗೆ ಪರ್ಯಾಯವಾದ ಯಾವ ಸಂಪತ್ತೂ ಇಲ್ಲ ಎಂದು ಹೇಳಿದ ಅವರು, ಹಿರಿಯ ನಾಗರಿಕರ ಸೇವೆ-ಸಾಧನೆ ಶ್ಲಾಘನೀಯವಾಗಿದೆ ಎಂದು ಹೇಳಿ ಅಭಿನಂದಿಸಿದರು.
ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣಸಂಸ್ಥೆಯ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಮಾತನಾಡಿ, ತನ್ನ ಬಾಲ್ಯದ ಬಡತನ ಹಾಗೂ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು ಗುರು-ಹಿರಿಯರ ಆಶೀರ್ವಾದಗಳೊಂದಿಗೆ ತನ್ನ ಭಗೀರಥ ಪ್ರಯತ್ನದಿಂದ ಉಜಿರೆಯಲ್ಲಿ ರತ್ನಮಾನಸ ಹಾಗೂ ಸಿದ್ಧವನ ಗುರುಕುಲದಲ್ಲಿ ದೊರಕಿದ ಜೀವನಶಿಕ್ಷಣದಿಂದ ತಾನು ಉನ್ನತ ಸಾಧನೆ ಮಾಡಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಯಿತು. ಈ ದಿಸೆಯಲ್ಲಿ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮೂಡಬಿದ್ರೆಯ ಡಾ. ಮೋಹನ ಆಳ್ವರ ನೆರವು, ಮಾರ್ಗದರ್ಶನವನ್ನು ಧನ್ಯತೆಯಿಂದ ಸ್ಮರಿಸಿದರು.
ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ ಮಾಲಕ ಶ್ರೀಕಾಂತ ಕಾಮತ್ ಅಭಿನಂದನಾ ಭಾಷಣ ಮಾಡಿದರು. ಹಿರಿಯರ ನಾಗರಿಕರಾದ ದಿವಾಕರ ಶೆಟ್ಟಿ, ಮೋಹನ್ ಎಸ್. ಜೈನ್, ಶಂಭುಶರ್ಮ, ಈಶ್ವರನಾಯ್ಕ, ಸೋಮೇ ಗೌಡ, ಮೃತ್ಯುಂಜಯ ಫಡ್ಕೆ, ಶಿವರಾಮ ತೋಡ್ತಿಲ್ಲಾಯ ಮತ್ತು ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆಯ ಸುರೇಶ್ ಕುದ್ರೆಂತ್ತಾಯ ಅವರನ್ನು ಗೌರವಿಸಲಾಯಿತು.
ಯು. ಶಂಭು ಶರ್ಮ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸುರೇಶ ಕುದ್ರೆಂತ್ತಾಯರು ಯಕ್ಷಗಾನ ಶೈಲಿಯಲ್ಲಿ ದೇವರ ಪ್ರಾರ್ಥನೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರಿಗೂ ಶುಭ ಹಾರೈಸಿದರು. ಕಾರ್ಯದರ್ಶಿ ವಿಶ್ವಾಸರಾವ್ ವರದಿ ಸಾದರಪಡಿಸಿದರು. ಕೃಷಿಪ್ರಶಸ್ತಿ ಪುರಸ್ಕೃತರಾದ ರಾಧಮ್ಮ ಮತ್ತು ಕೂಸಪ್ಪ ಗೌಡ ದಂಪತಿಯನ್ನು ಗೌರವಿಸಲಾಯಿತು. ನಾರಾವಿಯ ಸನ್ಮತ್‌ಕುಮಾರ್ ಜೈನ್ ಸ್ವಾಗತಿಸಿದರು. ವಸಂತ ಸುವರ್ಣ ಧನ್ಯವಾದವಿತ್ತರು. ಸುಬ್ರಹ್ಮಣ್ಯರಾವ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.

Related posts

ಕೊಕ್ರಾಡಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿದ ನೆಂಪು ಕಾರ್ಯಕ್ರಮ

Suddi Udaya

ಉಜಿರೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ರಿಕ್ಷಾ

Suddi Udaya

ಶಿಶಿಲ : ಸೃಷ್ಟಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಸುರ್ಯ ದೇವಸ್ಥಾನಕ್ಕೆ ಭೇಟಿ

Suddi Udaya

ಉಜಿರೆ ಅರಿಪ್ಪಾಡಿ ಮಠ ಬಾಲಕೃಷ್ಣ ಅರಿಪ್ಪಾಡಿತ್ತಾಯ ನಿಧನ

Suddi Udaya

ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ, ಇದೀಗ ಮತ್ತೆ ಶುರುವಾಗಿದೆ. ಹೈಕಮಾಂಡ್‌ನ ಖಡಕ್‌

Suddi Udaya
error: Content is protected !!