November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ: ಅಡ್ಡಹಳ್ಳ ಫ್ರೆಂಡ್ಸ್‌ ವತಿಯಿಂದ ದೀಪಾವಳಿ ಪ್ರಯುಕ್ತ ದೋಸೆ ಹಬ್ಬ ಹಾಗೂ ಹೊನಲು ಬೆಳಕಿನ ಹಗ್ಗಜಗ್ಗಾಟ

ಶಿಶಿಲ: ಅಡ್ಡಹಳ್ಳ ಫ್ರೆಂಡ್ಸ್‌ ವತಿಯಿಂದ ಶಿಶಿಲದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಹಾಗೂ ಹೊನಲು ಬೆಳಕಿನ ಹಗ್ಗಜಗ್ಗಾಟ ಕಾರ್ಯಕ್ರಮವು ನ.7ರಂದು ನಡೆಯಿತು.

ದೋಸೆ ಹಬ್ಬಕ್ಕೆ ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ್ ದಾಮ್ಲೆ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಅಡ್ಡಹಳ್ಳ ಫ್ರೆಂಡ್ಸ್‌ ಅಧ್ಯಕ್ಷ ಕರುಣಾಕರ ಶಿಶಿಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಅಡ್ಡಹಳ್ಳ ಫ್ರೆಂಡ್ಸ್‌ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಿಂದೂ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಹಾಗೂ ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ್ ಗೌಡ ಅಡ್ಕಾಡಿ ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಕರುಣಾಕರ ಶಿಶಿಲ ಮಾತನಾಡಿ, ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊಕ್ಕಡದ ಕಾಪಿನಬಾಗಿಲಿನಲ್ಲಿ ಮಹಾದ್ವಾರ ನಿರ್ಮಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ, ಮುಂದಿನ ದಿನಗಳಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯವನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕಿರಣ್ ಚಂದ್ರ ಡಿ. ಪುಷ್ಪಗಿರಿ ದೀಪಾವಳಿ ಶುಭಾಶಯಗಳನ್ನು ತಿಳಿಸಿ, ಮಹಾದ್ವಾರ ನಿರ್ಮಾಣಕ್ಕಾಗಿ ರೂ.1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಅರಸಿನಮಕ್ಕಿ ವಿಪತ್ತು ನಿರ್ವಹಣಾ ಘಟಕದ ಎಲ್ಲಾ ಸದಸ್ಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಮಾಲತಿ ಹಾಗೂ ಶಿಶಿಲದ ದೈವ ನರ್ತಕ ನಾರ್ಣ ನಲಿಕೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಸಂದೀಪ್ ಅಮ್ಮುಡಂಗ ಸ್ವಾಗತಿಸಿದರು. ಕುಮಾರಿ ಚಂದನ ನಿರೂಪಿಸಿದರು. ಪವನ್ ಆಚಾರ್ಯ ವಂದಿಸಿದರು.

ರಾತ್ರಿ ನಡೆದ ಹೊನಲು ಬೆಳಕಿನಲ್ಲಿ 525+5 ಕೆ.ಜಿ. ವಿಭಾಗದ ಇಂಟರ್‌ಲಾಕ್ ಮಾದರಿಯ ಹಗ್ಗಜಗ್ಗಾಟ ಸ್ಪರ್ಧೆ ಪ್ರೇಕ್ಷಕರ ಗಮನ ಸೆಳೆಯಿತು. ಅಂತರ್‌ರಾಜ್ಯ ಮಟ್ಟದ ನಿರೂಪಕ ಸುರೇಶ್ ಪಡಿಪಂಡ ಹಗ್ಗಜಗ್ಗಾಟ ನಡೆಸಿಕೊಟ್ಟರು.

Related posts

ಉಜಿರೆ ಲಲಿತನಗರ ನಿವಾಸಿ ಲೀಲಾವತಿ ನಿಧನ

Suddi Udaya

ಪಣಕಜೆ ವಿಜಯ ಸಾಲ್ಯಾನರವರ ಮನೆಗೆ ಬಿದ್ದ ಮರ

Suddi Udaya

ಹತ್ಯಡ್ಕ: ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರಿಂದ ಅನುದಾನ ರೂ.5 ಲಕ್ಷ ಮಂಜೂರು

Suddi Udaya

ನಾವೂರು ಆರೋಗ್ಯ ಕ್ಲಿನಿಕ್ ಗೆ ಬೆಂಕಿ: ಕಿಡಿಗೇಡಿಗಳ ಕೃತ್ಯಕ್ಕೆ ಬಜರಂಗದಳ ಸಹ ಸಂಯೋಜಕ ಗೌರವ್ ಸುರ್ಯ ಖಂಡನೆ

Suddi Udaya

ಕುವೆಟ್ಟು: ಕರ್ತವ್ಯ ಲೋಪ ಎಸಗಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ: ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು

Suddi Udaya

ಎಸ್.ಡಿ.ಎಮ್ ಮಹಿಳಾ ಐ.ಟಿ.ಐ ಯಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಪಡೆದ ಫ್ಯಾಶನ್ ಡಿಸೈನ್ ಮತ್ತು ಟೆಕ್ನಾಲಜಿ ವೃತ್ತಿ ಆರಂಭ

Suddi Udaya
error: Content is protected !!