November 9, 2026
Uncategorized

ಬೆಳ್ತಂಗಡಿ ಪ್ರೊಫೆಷನಲ್ ಕೊರಿಯರ್ ಸಿಬ್ಬಂದಿ ವರ್ಗದವರಿಂದ : ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತಯಕ್ಷಗಾನ ಹಾಸ್ಯ ಕಲಾವಿದಸುಂದರ ಬಂಗಾಡಿಯವರಿಗೆ ಸನ್ಮಾನ

ಬೆಳ್ತಂಗಡಿ : ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯ ಕಲಾವಿದನಾಗಿ ವಿಶೇಷ ಸಾದನೆಗೈದು ಜಿಲ್ಲಾ ರಾಜ್ಯೋತ್ಸವ
ಪ್ರಶಸ್ತಿ ಪುರಸ್ಕೃತಗೊಂಡ ಸುಂದರ ಬಂಗಾಡಿ ಇವರನ್ನು ಬೆಳ್ತಂಗಡಿ ಪ್ರೊಫೆಷನಲ್ ಕೊರಿಯರ್ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು.
ಪ್ರೊಫೆಷನಲ್ ಕೊರಿಯರ್ ನ ಪ್ರಬಂಧಕರಾದ ರಾಜೀವ್ ಬಿ.ಹೆಚ್ ರವರು ಮಾತನಾಡಿ ಸುಂದರ ಬಂಗಾಡಿಯವರು ವಿಶೇಷ ಪ್ರತಿಭೆವುಳ್ಳವರು ಇವರ ಪ್ರತಿಭೆಯನ್ನು ಗುರುತಿಸಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿರುವುದು ಬೆಳ್ತಂಗಡಿಯ ಜನತೆಗೆ ಅತೀವ ಸಂತಸ ತಂದಿದೆ ಯಕ್ಷಗಾನ ಕ್ಷೇತ್ರದಲ್ಲಿ ಇವರ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಎನ್ನುತ್ತಾ ಶುಭ ಹಾರೈಸಿದರು.

ಸನ್ಮಾನವನ್ನು ಸ್ವೀಕರಿಸಿದ ಸುಂದರ ಬಂಗಾಡಿಯವರು ನಿಮ್ಮ ಈ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ದೈವ ದೇವರ ಮೇಲೆ ನಂಬಿಕೆ ಇಟ್ಟು ಗುರು ಹಿರಿಯರ ಮೇಲೆ ಗೌರವವನ್ನು ಇಟ್ಟು ಜೀವನ ನಡೆಸಿದಲ್ಲಿ ನಾವು ಯಶಸ್ಸನ್ನು ಕಾಣಬಹುದು ರಾಜೀವ್ ಬಿ.ಹೆಚ್ . ರವರು ಓರ್ವ ಕಲಾವಿದನಾಗಿ ಮತ್ತೊಬ್ಬ ಕಲಾವಿದನನ್ನು ಗುರುತಿಸುವ ಕೆಲಸವನ್ನು ಮಾಡಿದ್ದಾರೆ ಅದಕ್ಕಾಗಿ ನಿಮ್ಮೆಲ್ಲರಿಗೂ ಚಿರಋಣಿಯಾಗಿದ್ದೇನೆ ಎನ್ನುತ್ತಾ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಯಶೋಧರ ,ರಮೇಶ, ಸುಂದರ, ಅಖಿಲ, ಸುಮಿತ, ಕವಿತಾ, ಪ್ರೀತಿ, ಅಂಕಿತ, ರಕ್ಷಾ ಹಾಗೂ ಸುಂದರ ಬಂಗಾಡಿಯವರ ಶ್ರೀಮತಿಯಾದ ಪ್ರೊಫೆಷನಲ್ ಕೊರಿಯರ್ ನ ಸಿಬ್ಬಂದಿ ಜಯಂತಿ ಉಪಸ್ಥಿತರಿದ್ದರು.ಪ್ರಬಂಧಕರಾದ ರಾಜೀವ್ ಬಿ. ಎಚ್ ರವರು ಸ್ವಾಗತಿಸಿ ಧನ್ಯವಾದ ನೀಡಿದರು.

Related posts

ನಾವೂರು ಜಯಂತಿ ಸಾಂತಿಪಲ್ಕೆ ನಿಧನ

Suddi Udaya

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ – ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾಷೆಯಿಂದ ಸಂಸ್ಕೃತಿ ಉಳಿಯಲು ಸಾಧ್ಯ: ಪ್ರಸಾದ್ ಶೆಟ್ಟಿ ಎಣಿಂಜೆ

Suddi Udaya

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ಸೌಮ್ಯ ಲಾಯಿಲ

Suddi Udaya

ನ .29: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ವಾಹನಗಳ ಹರಾಜು

Suddi Udaya

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya
error: Content is protected !!