ಬೆಳ್ತಂಗಡಿ: ಪ್ರಾದ್ವಿ ಚಾಲೆಂಜರ್ಸ್ ಅರ್ವ ಮತ್ತು ‘ನಮ್ಮ ಜವನೆರ್ ಹವ್ಯಾಸಿ ಕ್ರೀಡಾ ತಂಡ ಅರ್ವ ಇದರ ಜಂಟಿ ಆಶ್ರಯದಲ್ಲಿ ನ.8ರಂದು ದೀಪಾವಳಿ ಪ್ರಯುಕ್ತ 3ನೇ ವರ್ಷದ ಗ್ರಾಮೀಣ ಕ್ರೀಡಾ ಕೂಟ ಕೆಸರ್ದ ಗೊಬ್ಬು ಎಸಲ್ -3 ಕಾರ್ಯಕ್ರಮದಲ್ಲಿ ಚಿತ್ರಕಲಾ ಕಲಾವಿದ ಜಯಪ್ರಸಾದ್ ಆಚಾರ್ಯ ಕುದ್ಯಾಡಿ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಮಂಜುನಾಥ ಆಚಾರ್ಯ ಅಳದಂಗಡಿ, ಅಭಿಷೇಕ್ ಪೂಜಾರಿ, ಪ್ರಭಾಕರ ಪೂಜಾರಿ ಕೊಡಂಗೆ, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ರಾಜೇಶ್ ಕುಲಾಲ್, ಉಮೇಶ್ ಸುವರ್ಣ, ಕೊರಗಪ್ಪ ಪೂಜಾರಿ, ಆನಂದ ಪೂಜಾರಿ ಹಾಗೂ ಪ್ರಾದ್ವಿ ಚಾಲೆಂಜರ್ಸ್ ಅರ್ವ ಮತ್ತು ‘ನಮ್ಮ ಜವನೆರ್ ಹವ್ಯಾಸಿ ಕ್ರೀಡಾ ತಂಡ ಅರ್ವ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.















