November 10, 2026
Uncategorized

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಾಚಾರಿ ಮುಂಡಾಜೆ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಜೆಡಿಎಸ್ ಪಕ್ಷದ ಬೆಳ್ತಂಗಡಿ ತಾಲೂಕಿನ ಹಿರಿಯ ಕಟ್ಟಾಳು, ಅನೇಕ‌ ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ರಾಮಾಚಾರಿ (68) ಅವರು ಹೃದಯಾಘಾತದಿಂದ ನ.9 ರಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದ ಅವರು ಧರ್ಮಸ್ಥಳದ ಅಜಿಕುರಿಗೆ ಬಂದಿದ್ದರು. ಅಲ್ಲಿಂದ ಬಳಿಕ ಮುಂಡಾಜೆಗೆ ಬಂದು ನೆಲೆಸಿದ್ದರು.

ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ ಮೋರಿಗಳ ರಚನೆ ಇತ್ಯಾಧಿಯಾಗಿ ಸರಕಾರದ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ್ದರು‌‌. ಇತ್ತೀಚಿಗಿನ ಕೆಲ ವರ್ಷಗಳಿಂದ ಮುಂಡಾಜೆ ಗ್ರಾಮ ಪಂಚಾಯತ್ ನ ಉದ್ಯೋಗ ಮಿತ್ರ ರಾಗಿ(ಉದ್ಯೋಗ ಖಾತರಿ) ಸೇವೆ ಸಲ್ಲಿಸುತ್ತಿದ್ದರು.
ಕೆಲದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಮೂರು ದಿನಗಳ ಹಿಂದೆ ಮತ್ತೆ ಅನಾರೋಗ್ಯ ಕಾಣಸಿಕೊಂಡು ಆಸ್ಪತ್ರೆಗೆ ತೆರಳಿದ್ದವರಿಗೆ ಸೋಮವಾರ ಬಳಗ್ಗಿನ ಜಾವಾ ಹೃದಯಾಘಾತವಾಗಿ ಸಾವನ್ನಪ್ಪಿದರು.
ಮೃತರು ಪತ್ನಿ ಚಂದ್ರಾವತಿ, ಮಕ್ಕಳಾದ
ಮಧುಸೂಧನ್, ಸುಭಾಷ್ ಮತ್ತು ಗುರುರಾಜ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರ: ಅವರ ಮೃತದೇಹದ
ಅಂತ್ಯ ಸಂಸ್ಕಾರ ಮುಂಡಾಜೆ ಗ್ರಾಮದ ಒಂಜರೆಬೈಲಿನ ಸ್ವಂತ ಜಾಗದಲ್ಲಿ ನಡೆಯಿತು.

Related posts

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya

ವಿಧಾನ ಪರಿಷತ್ ಉಪಚುನಾವಣೆ : ಬೆಳ್ತಂಗಡಿ ಮಂಡಲದ ಬಿಜೆಪಿ ಚುನಾವಣಾ ಸಂಚಾಲಕರಾಗಿ ಪ್ರಭಾಕರ ಆಚಾರ್ಯ, ಸಹ ಸಂಚಾಲಕರಾಗಿ ಅರವಿಂದ ಲಾಯಿಲ

Suddi Udaya

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಪಲ್ಕೆ ಶಾಲೆ ಮಕ್ಕಳಿಗೆ ಊಟದ ತಟ್ಟೆ ವಿತರಣೆ

Suddi Udaya

ಜಿಲ್ಲಾ ರಾಜೋತ್ಸವ ಪುರಸ್ಕೃತ ವಸಂತಿ ನಿಡ್ಲೆ ಯವರಿಗೆ ಮೊಗೇರ ಸಂಘದಿಂದ ಸನ್ಮಾನ

Suddi Udaya

ವೇಣೂರು: 32ನೇ ವರ್ಷದ ವೇಣೂರು-ಪೆರ್ಮುಡ ಸೂರ್ಯ -ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ

Suddi Udaya
error: Content is protected !!