ಬೆಳ್ತಂಗಡಿ: ಬೆಳ್ತಂಗಡಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಗ್ರಾಮಗಳ 2026-27 ನೇ ಸಾಲಿನ ಮಾರುಕಟ್ಟೆ ದರ ಪಟ್ಟಿಯನ್ನು ಮಾನ್ಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರುರವರು ನಿರ್ದೇಶನದಂತೆ ಸಿವಿಸಿ ವಿಭಾಗ ಉಪಸಮಿತಿಯಲ್ಲಿ ಅನುಮೋದನೆಯಾಗಿರುವ ದರಗಳಿಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಉಪನೋಂದಣಾಧಿಕಾರಿ, ಉಪನೋಂದಣಿ ಕಛೇರಿ ಬೆಳ್ತಂಗಡಿ ರವರಲ್ಲಿ ನ.13ರಿಂದ ಡಿ.2ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.








