November 11, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಂಗಳೂರು ವಿವಿ ಅಂತರ್ ವಲಯ ಪುರುಷರ ಕಬಡ್ಡಿ ಪಂದ್ಯಾಟ: ಉಜಿರೆಯ ಎಸ್.ಡಿ.ಎಂ ತಂಡ ಚಾಂಪಿಯನ್ಸ್

ಉಜಿರೆ: ಕೋಟೇಶ್ವರದ ಶ್ರೀ ಕಲಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ತಂಡ ಭರ್ಜರಿ ಜಯ ಸಾಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಪಂದ್ಯಾಟದ ಚಾಂಪಿಯನ್ಸ್ ಗಳಾಗಿದ್ದಾರೆ.

ಎಸ್.ಡಿ.ಎಂ ಕಾಲೇಜಿನ ಪುರುಷರ ಕಬಡ್ಡಿ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ತಂಡವನ್ನು 42 – 24 ಅಂಕಗಳ ಅಂತರದಿಂದ ಮಣಿಸಿ ಫೈನಲ್ ಪ್ರವೇಶ ಪಡೆಯಿತು. ಅಂತಿಮ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡವನ್ನು ಎದುರಿಸಿದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವು ಸುಮಾರು 38 – 18 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಆಳ್ವಾಸ್ ಕಾಲೇಜಿನ ತಂಡದಲ್ಲಿ ಪ್ರೋ ಕಬ್ಬಡ್ಡಿ ಖ್ಯಾತಿಯ ಉತ್ತರ ಪ್ರದೇಶ ಸೇರಿದಂತೆ ನಾನಾ ರಾಜ್ಯ ತಂಡಗಳ 5 ಪ್ರಮುಖ ರಾಷ್ಟ್ರೀಯ ಮಟ್ಟದ ಆಟಗಾರರಿದ್ದರೂ, ಗ್ರಾಮೀಣ ಎಸ್.ಡಿ.ಎಂ ಕಾಲೇಜಿನ ತಂಡದ ಕ್ರೀಡಾಪಟುಗಳು ಸೋಲಿಸಿದ್ದು ಬಲು ವಿಶೇಷವಾಗಿತ್ತು. ಈ ಮೂಲಕ ಎಸ್.ಡಿ.ಎಂ ತಂಡವು ಪ್ರತಿಷ್ಠಿತ ಶ್ರೀ ರತ್ನವರ್ಮ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ತಂಡದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ದೇವು, ಗಂಗಾರಾಮ, ಶ್ರೀಥಿನ್, ಸತ್ಯ, ಬಾಗು, ಆಶಿಸ್, ಚೇತನ್, ಸೋಹಿಲ್, ಲಿಖಿತ್, ಆನಂದ, ಅರುಣ ಹಾಗು ಕಾರ್ತಿಕ್ ಪಾಲ್ಗೊಂಡಿದ್ದರು. ಪಂದ್ಯಾಟದಲ್ಲಿ ಎಸ್.ಡಿ.ಎಂ ಕಾಲೇಜಿನ ದೇವು ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. ತಂಡಕ್ಕೆ ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರ ಹಾಗು ತರಬೇತುದಾರ ಕೃಷ್ಣಾನಂದ ಮತ್ತು ಜಸ್ವಂತ್ ತರಬೇತಿ ನೀಡಿರುತ್ತಾರೆ.

ವಿಜೇತ ತಂಡಕ್ಕೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಕೃಷ್ಣಾನಂದ, ಶಾರದಾ,ಸುದೀನ್ ಪುಜಾರಿ, ಸಂದೇಶ್ ಪೂಂಜಾ ಮತ್ತು ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Related posts

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಹಾಗೂ ಜೆ ಜೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜುಶ್ರೀ ಜೇಸೀಸ್ ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ಮಕ್ಕಳಿಗೆ”ಪರಿಣಾಮಕಾರಿ ನಾಯಕತ್ವ” ಮಾಹಿತಿ ಶಿಬಿರ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಅಂಡಿಂಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

Suddi Udaya

ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಮೂರನೇ ಶನಿವಾರ ಬ್ಯಾಗ್ ರಹಿತ ದಿನ

Suddi Udaya

ಕೊಯ್ಯೂರು ಶಾಲೆಯ ಹಿರಿಯ ಸಹಶಿಕ್ಷಕಿ ನಿವೃತ್ತ ಶ್ರೀಮತಿ ರೆಜಿನಾ ಡಿಸಿಲ್ವ ರವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮ

Suddi Udaya
error: Content is protected !!