November 14, 2026
ಅಪಘಾತತಾಲೂಕು ಸುದ್ದಿ

ಉಜಿರೆ: ಆಟೋರಿಕ್ಷಾಕ್ಕೆ ದ್ವಿಚಕ್ರ ವಾಹನ ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಾಯ

ಉಜಿರೆ: ಉಂಡ್ಯಾಪುನಗರ ಎಂಬಲ್ಲಿ ದ್ವಿಚಕ್ರವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಸಂಭವಿಸಿದ ಅಪಘಾತದಲ್ಲಿ ಸವಾರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನ.10ರಂದು ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಆದಿಶಕ್ತಿನಗರ ಮಸೀದಿ ಹತ್ತಿರದ ನಿವಾಸಿ ಆಸೀಫ್ ಎಂಬವರು ಪುತ್ತೂರಿನಿಂದ ಆಟೋರಿಕ್ಷಾವನ್ನು ಖರೀದಿ ಮಾಡಿಕೊಂಡು ಚಾಲಕರಾಗಿ ಅವರ ಮಗ ಮಹಮ್ಮದ್ ಹಝಾನ್ ಹಾಗೂ ಭಾವ ಶಾಹಿದ್ ಎಂಬವರನ್ನು ಕುಳ್ಳಿರಿಸಿಕೊಂಡು ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಹೋಗುತ್ತಿರುವಾಗ ಉಜಿರೆ ಉಂಡ್ಯಾಪುನಗರದಲ್ಲಿ ಉಜಿರೆ ಕಡೆಯಿಂದ ಬೆಳಾಲು ಕಡೆಗೆ ವಿಶ್ವನಾಥ ಎಂಬವರು ಅಜಾಗರೂಕತೆಯಿಂದ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದರೆನ್ನಲಾಗಿದೆ. ದ್ವಿಚಕ್ರವಾಹ ಸಮೇತ ರಸ್ತೆಗೆ ಬಿದ್ದು ತಲೆಗೆ ಗಾಯಗೊಂಡ ವಿಶ್ವನಾಥರನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರಾಜ್ಯದ ಜನರಿಗೆ ಬೆಲೆ ಏರಿಕೆ ಮೂಲಕ ಬರೆ ಎಳೆದ ಕಾಂಗ್ರೆಸ್ ಸರಕಾರ :ಉಚಿತ ಗ್ಯಾರಂಟಿಯ ಹೊರೆ ಭರಿಸಲಾದೆ ಸರ್ಕಾರ ದಿವಾಳಿ ಅಂಚಿಗೆ

Suddi Udaya

ಸೌತಡ್ಕ ಶ್ರೀ ಕಾಮಧೇನು ಗೋಶಾಲೆಗೆ ಡಾ. ಪ್ರಸನ್ನ ಹೆಬ್ಬಾರ್ ಭೇಟಿ

Suddi Udaya

ಕರಾಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬೊಮ್ಮಯ ಬಂಗೇರ ಆಯ್ಕೆ

Suddi Udaya

ಜ.12: ಮುಂಡಾಜೆಯಲ್ಲಿ ಸಾವಿರದ ಸಾಧಕರು ಮನೆಮನದ ಸಮ್ಮಾನ:

Suddi Udaya

ನಾಳ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

Suddi Udaya
error: Content is protected !!