September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ಬೆಳ್ತಂಗಡಿ: ಸುಂದರವಾದ ಮರದಲ್ಲಿ ಹೂವು, ಕಾಯಿ, ಹಣ್ಣುಗಳು ಇರಬೇಕಾದರೆ ಅದರ ಬೇರು ಗಟ್ಟಿಯಾಗಿರಬೇಕು. ಅಂತೆಯೇ ಸುಂದರ ಕುಟುಂಬದ ಭದ್ರತೆಗೆ ಆ ಮನೆಯಲ್ಲಿರುವ ಹಿರಿಯರು ಬೇರು ಇದ್ದಂತೆ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಹೇಳಿದರು.

ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬೆಳ್ತಂಗಡಿ, ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಹಾಗೂ ತಾಲೂಕು ಪಂಚಾಯತ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಕೇಂದ್ರ ಸರಕಾರದ ಹಿರಿಯ ನಾಗರೀಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಇಲ್ಲಿನ ತಾ. ಪಂ. ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ವಹಿಸಿದ್ದರು.

ಹಿರಿಯ ನಾಗರಿಕರನ್ನು ಅವಕಾಶ ವಂಚಿತರನ್ನಾಗಿ ಮಾಡಿಸುವುದೂ ಕೂಡ ಅಪರಾಧವೇ ಆಗಿದೆ. ಕಾನೂನು ಮೀರುವವರಿಗೆ ಶಿಕ್ಷೆ ವಿಧಿಸಿದಾಗ ಅದರ ಪಾಲನೆ ಮಾಡುವ ಮಾನಸಿಕತೆ ಕೂಡ ಬೆಳೆಯಬೇಕಾಗುತ್ತದೆ. ಆ ಸಂಸ್ಕೃತಿಯನ್ನು ಈ‌ ಸಮಾಜದಲ್ಲಿ ಬೆಳೆಸುವ ಜಬಾವ್ಧಾರಿ ನಮ್ಮೆಲ್ಲರ ಮೇಲೆ ಇದೆ ಎಂದವರು ತಿಳಿಸಿದರು.

ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ತಾಲೂಕು ವಕೀಲರ ಸಂಘದ ಕೋಶಾಧಿಕಾರಿ ಮಂಮ್ತಾಝ್ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ. , ಜಿ.ಪಂ., ಮಾಜಿ ಸದಸ್ಯೆ ಹಾಗೂ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘ ಬೆಳ್ತಂಗಡಿ ಸಲಹಾ ಸಮಿತಿ ಸದಸ್ಯೆ ಸಿ.ಕೆ. ಚಂದ್ರಕಲಾ ಮೊದಲಾದವರು ಗೌರವ ಉಪಸ್ಥಿತರಿದ್ದರು.

ಇದೇ ವೇಳೆ ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿಯನ್ನು ಹಿರಿಯ ವಕೀಲೆ ಸುಭಾಶಿನಿ ಆರ್, ಸರಕಾರದ ಯೋಜನೆಗಳ ಮಾಹಿತಿಯನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ನಡೆಸಿಕೊಟ್ಟು ಪ್ರಶ್ನೋತ್ತರಗಳಿಗೆ ಸಂವಾದದ ರೀತಿಯಲ್ಲಿ ಉತ್ತರಿಸಿದರು.

ಇಂದಬೆಟ್ಟು ಗ್ರಾ.ಪಂ ವಿಆರ್‌ಡಬ್ಲ್ಯು ಎಂ.ಜೆ ಜೋಸೆಫ್ ಸ್ವಾಗತಿಸಿ ಪ್ರಸ್ತಾವನೆಗೈದರು. ನಿಡ್ಲೆ ವಿಆರ್‌ಡಬ್ಲ್ಯು ಹೇಮಲತಾ ಪ್ರಾರ್ಥನೆ ಹಾಡಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಬೆಳಾಲು ಗ್ರಾ.ಪಂ ವಿಆರ್‌ಡಬ್ಲ್ಯು ಈರಣ್ಣ ವಂದಿಸಿದರು.

ಮಕ್ಕಳಿಗೆ ಸರಕಾರಿ ನೌಕರಿ ದೊರೆತರೆ ಅವರ ಹೆತ್ತವರಿಗೆ ದೊರೆಯುತ್ತಿದ್ದ ಹಿರಿಯ ನಾಗರಿಕರ ಪಿಂಚಣಿ ಸ್ಥಗಿತಗೊಳಿಸುವ ನೀತಿ ಬದಲಾಗಬೇಕಿದೆ. ಯಾಕೆಂದರೆ ಸರಕಾರದಿಂದ ಸಿಗುವ ಪಿಂಚಣಿಯಿಂದ ಅವರ ಉದ್ದೇಶ ಎಲ್ಲವು ಈಡೇರುತ್ತದೆ ಎಂಬುದಲ್ಲ. ಆದರೆ ಅವರಿಗೆ ಒಂದು ಭರವಸೆ ಲಭಿಸುತ್ತದೆ ಎಂಬುದನ್ನು ಮನಗಾಣಬೇಕು.
-ರಾಮಲಿಂಗಪ್ಪ ಪ್ರಧಾನ ಸಿವಿಲ್ ನ್ಯಾಯಾಧೀಶರು

Related posts

ಚುನಾವಣಾ ಕಾನೂನು ಸುವ್ಯವಸ್ಥೆ, ಕಾಪಾಡುವ ಹಿತದೃಷ್ಟಿಯಿಂದ : ಎ.17 ಸೋಮವಾರ ಬೆಳ್ತಂಗಡಿ ಸಂತೆಕಟ್ಟೆ‌ಯಿಂದ ಬಸ್ ನಿಲ್ದಾಣದವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ವ್ಯಾಪಾರ ನಿಷೇಧ

Suddi Udaya

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನಕ್ಕೆ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಎಸ್.ಡಿ.ಎಂ ಪ.ಪೂ ಕಾಲೇಜು : ‘ ಪ್ರವೇಶಂ’ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya

ಪಿಲ್ಯ: ಸದಾಶಿವ ಆಠವಳೆ ನಿಧನ

Suddi Udaya

ಮಲವಂತಿಗೆ: ಮೇಗಿನ ಕರಿಯಾಲು ನಿವಾಸಿ ಕೆ. ಸಂಜೀವ ಗೌಡ ನಿಧನ

Suddi Udaya
error: Content is protected !!