November 16, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನೆ – ಸಂಘಕ್ಕೆ ನೂತನ ಇಕೋ ಕಾರು ಖರೀದಿ

ಬೆಳ್ತಂಗಡಿ: ತಾಲೂಕಿನ ಹಳೆಕೋಟೆಯಲ್ಲಿರುವ ‘ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ’ ಇದರ ನೂತನ ಆಡಳಿತ ಕಚೇರಿಯ ಉದ್ಘಾಟನೆ ಹಾಗೂ ನೂತನ ಇಕೋ ಕಾರು ಹಸ್ತಾಂತರ ಸಮಾರಂಭವು ನ.16 ರಂದು ಅತ್ಯಂತ ಸಂಭ್ರಮದಿAದ ನೆರವೇರಿತು. 

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಡಿ. ಕಿರಣ್‌ಚಂದ್ರ ಪುಷ್ಪಗಿರಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಪಿ. ಕುಶಾಲಪ್ಪ ಗೌಡ, ಗೌರವಾಧ್ಯಕ್ಷರಾದ ಹೆಚ್. ಪದ್ಮ ಗೌಡ, ಉಪಾಧ್ಯಕ್ಷರಾದ ನಾರಾಯಣ ಗೌಡ, ಕಾರ್ಯದರ್ಶಿಯಾದ ಗಣೇಶ್ ಗೌಡ, ಜತೆ ಕಾರ್ಯದರ್ಶಿ ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ, ಯುವ ವೇದಿಕೆಯ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ನಿರ್ದೇಶಕರಾದ ಜಯಾನಂದ ಗೌಡ, ಮಹಾಬಲ ಗೌಡ, ಡಿ.ಎಂ. ಗೌಡ, ಯುವರಾಜ್ ಗೌಡ ಹಾಗೂ ಯುವ ವೇದಿಕೆಯ ನವೀನ್ ಬಿ.ಕೆ. ಮತ್ತು ಪ್ರದೀಪ್ ಗೌಡ ನಾಗಾಜೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸಂಘದ ಸೇವಾ ಚಟುವಟಿಕೆಗಳಿಗೆ ಪೂರಕವಾಗಿ ನೂತನ ಇಕೋ ಕಾರನ್ನು ಖರೀದಿಸಲಾಯಿತು. ಈ ನೂತನ ಕಚೇರಿ ಹಾಗೂ ವಾಹನ ಸೌಲಭ್ಯವು ಸಮುದಾಯದ ಸಂಘಟನೆ ಮತ್ತು ತುರ್ತು ಸೇವಾ ಕಾರ್ಯಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೊಬೋಟಿಕ್ಸ್ ಕಾರ್ಯಾಗಾರ

Suddi Udaya

ಕನ್ಯಾಡಿ || : ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ಬೆಳ್ತಂಗಡಿಯ ಶ್ರೀರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವ : ಧಾರ್ಮಿಕ ಸಭೆ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ-ಅನ್ವೇಷಣಾ-2024

Suddi Udaya

ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಮರಣ ನಿಧಿ ಪತ್ರ ಹಸ್ತಾಂತರ

Suddi Udaya
error: Content is protected !!