November 19, 2026
ಆಯ್ಕೆಚಿತ್ರ ವರದಿಪುತ್ತೂರುವರದಿ

ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿ ಶ್ರೀಕರ ಕರ್ಣಾಟಕ ಬ್ಯಾಂಕ್‌ಗೆ ಆಯ್ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವಂತಹ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ಹಾಗೂ ನುರಿತ ತಂಡದ ಮೂಲಕ ಸಮರ್ಥ ಮಾರ್ಗದರ್ಶನ ನೀಡುತ್ತಿರುವ ಮೂಲಕ ಕರಾವಳಿ ಕರ್ನಾಟಕದಲ್ಲೇ ಮನೆಮಾತಾಗಿರುವ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯ ಮತ್ತೊಬ್ಬ ವಿದ್ಯಾರ್ಥಿ ಇದೀಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.

ಅಕಾಡೆಮಿಯಿಂದ ತರಬೇತಿ ಹಾಗೂ ಮಾರ್ಗದರ್ಶನ ಪಡೆದ ಬನ್ನೂರಿನ ಶ್ರೀಕರ ಬಿ. ಅವರು ಕರ್ಣಾಟಕ ಬ್ಯಾಂಕ್‌ನ ನೇಮಕಾತಿ ಪ್ರಕ್ರಿಯೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ , ಹುದ್ದೆಗೆ ಆಯ್ಕೆಯಾಗಿ , ಪ್ರಸ್ತುತ ಹೊಸಕೋಟೆಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿರುತ್ತಾರೆ.

ಬನ್ನೂರು ನಿವಾಸಿ ಮೀನಾಕ್ಷಿ ಮತ್ತು ಬಿ. ಮಂಜುನಾಥಯ್ಯ ದಂಪತಿ ಪುತ್ರ ಶ್ರೀಕರ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದು, ವಿವಿಧ ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಇತ್ತೀಚೆಗೆ ನಡೆದ IBPS ನೇಮಕಾತಿ ಪರೀಕ್ಷೆಯಲ್ಲಿ ಕೆಲವೇ ಅಂಕಗಳ ಅಂತರದಿಂದ ಅವಕಾಶ ವಂಚಿತರಾಗಿದ್ದರೂ , ನಿರಾಶೆಗೊಳಗಾಗದೆ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪದ ಫಲವಾಗಿ ಇದೀಗ ಕರ್ನಾಟಕ ಬ್ಯಾಂಕ್‌ಗೆ ಆಯ್ಕೆಯಾಗುವ ಮೂಲಕ ತಮ್ಮ ಉದ್ಯೋಗದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ನಿರಂತರ ಪರಿಶ್ರಮಕ್ಕೆ ಸಂದ ಪ್ರತಿಫಲ: ಶ್ರೀಕರ ಅವರ ಈ ಸಾಧನೆಯ ಹಿಂದೆ ಅವರ ಕಠಿಣ ಪರಿಶ್ರಮದ ಜೊತೆಗೆ ವಿದ್ಯಾಮಾತಾ ಅಕಾಡೆಮಿಯ ನಿರಂತರ ತರಬೇತಿ ಹಾಗೂ ಮಾರ್ಗದರ್ಶನವೂ ಪ್ರಮುಖ ಪಾತ್ರ ವಹಿಸಿದೆ. ಒಂದೇ ಪ್ರಯತ್ನದಲ್ಲಿ ಯಶಸ್ಸು ದೊರೆಯದಿದ್ದರೂ ಎದೆಗುಂದದೆ ಮುನ್ನಡೆದ ಅವರ ಛಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಇತರ ಉದ್ಯೋಗಾಕಾಂಕ್ಷಿಗಳಿಗೂ ಮಾದರಿಯಾಗಿದೆ.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಯವರು ಮಾತನಾಡಿ, ಒಂದೇ ಸೂರಿನಡಿಯಲ್ಲಿ ನಾವು ನೀಡುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ನಿರಂತರ ಮಾರ್ಗದರ್ಶನ ಫಲಪ್ರದವಾಗುತ್ತಿರುವುದು ಸಂತಸದ ಸಂಗತಿಯೆಂದು ಹೇಳಿದರು. ಕರ್ಣಾಟಕ ಬ್ಯಾಂಕ್‌ಗೆ ಆಯ್ಕೆಯಾಗಿರುವ ಶ್ರೀಕರ ಅವರು ಇತರ ಸರ್ಕಾರಿ ಹಾಗೂ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಪ್ರೇರಣೆಯಾಗಿದ್ದಾರೆ. ಪ್ರಸ್ತುತ ನೇಮಕಾತಿ ಪರ್ವ ಆರಂಭವಾಗಿರುವ ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಮಗೆ ಇನ್ನಷ್ಟು ಹೊಸ ಉತ್ಸಾಹ ದೊರೆತಿದೆ. ನಮ್ಮಲ್ಲಿ ತರಬೇತಿ ಪಡೆಯುತ್ತಿರುವ ಇನ್ನಷ್ಟು ಅಭ್ಯರ್ಥಿಗಳು ವಿವಿಧ ಉದ್ಯೋಗಾವಕಾಶಗಳನ್ನು ಪಡೆದು ಯಶಸ್ಸು ಸಾಧಿಸಲಿ ಎಂಬುದೇ ನಮ್ಮ ಆಶಯ” ಎಂದು ಹೇಳಿ , ಶುಭ ಹಾರೈಸಿ , ಹರ್ಷ ವ್ಯಕ್ತಪಡಿಸಿದರು.

Related posts

ಸವಣಾಲು: ಹಿತ್ತಿಲಪೇಲ ಪ್ರದೇಶಕ್ಕೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿ ನೀಡುವಂತೆ ಮೇಲಂತಬೆಟ್ಟು ಗ್ರಾ.ಪಂ.ಗೆ ಮೌಖಿಕ ಆದೇಶ ನೀಡಿದ ಬೆಳ್ತಂಗಡಿ ನ್ಯಾಯಾಧೀಶರು

Suddi Udaya

ತಣ್ಣೀರುಪಂತ ಗ್ರಾ.ಪಂ.ನಲ್ಲಿ ಮಕ್ಕಳ ಸ್ನೇಹಿ ಅಭಿಯಾನದ ಪೂರ್ವಸಿದ್ಧತಾ ಸಭೆ

Suddi Udaya

ಎ.8-17: ಶ್ರೀ ಕ್ಷೇತ್ರ ಓಡೀಲುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

Suddi Udaya

ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ

Suddi Udaya
error: Content is protected !!