ನಾವೂರು: ಗ್ರಾಮದೈವ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ ನಡೆಸುವ ಕುರಿತಾಗಿ ನಾವೂರು ಪಲ್ಕೆಯಲ್ಲಿ ಸಮಾಲೋಚನಾ ಸಭೆಯನ್ನು ಅಧ್ಯಕ್ಷ ಗಣೇಶ್ ಕಣಾಲು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಾಸ್ತವಿಕವಾಗಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ಇವರು ಮಾತನಾಡಿ ನಾವೂರು ಗ್ರಾಮದೈವ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವವನ್ನು ಊರವರು ಸೇರಿ ಮಾಡುವ ತೀರ್ಮಾನವನ್ನು ಈಗಾಗಲೇ ತೆಗೆದುಕೊಂಡಿದ್ದು ಇದಕ್ಕೆ ಪೂರಕವಾಗಿ ಒಂದು ಟ್ರಸ್ಟ್ ಅನ್ನು ರಚಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಅಲ್ಲದೆ ನಮಗೆ ಯಾವ ಮಾಹಿತಿಯನ್ನು ನೀಡದೆ ಬಡೆಕ್ಕಾವು ಮನೆಯವರು ಕೂಡ ಟ್ರಸ್ಟ್ ರಚಿಸಿರುವುದು ಅಮಾನ್ಯ ಹಾಗೂ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಡಿಸಿದರು.
ಅಧ್ಯಕ್ಷ ಗಣೇಶ್ ಕಣಾಲು ಮಾತನಾಡಿ ದೊಂಪದಬಲಿ ಉತ್ಸವ ಸಲುವಾಗಿ ರಚಿಸಲಾದ ಟ್ರಸ್ಟ್ ಹಾಗೂ ಉತ್ಸವಕ್ಕೆ ಸಹಕಾರ ನೀಡುವಂತೆ ವಿನಂತಿಸಿದರು.
ಸಭೆಯಲ್ಲಿ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಟ್ರಸ್ಟ್ ರಚಿಸಿದ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದರು.
ಮೋಹನ್ ಬಂಗೇರ ಕಾರಿಂಜ ಇವರು ಸ್ವಾಗತಿಸಿ, ಗಣೇಶ್ ಗೌಡ ನೆಲಿಪಲ್ಕೆ ಧನ್ಯವಾದವಿತ್ತರು.













