November 20, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಸುರ್ಯ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಮತ್ತು ಬ್ರಹ್ಮರಥ ಸಮರ್ಪಣೆಯ ಕಚೇರಿ ಉದ್ಘಾಟನೆ ಹಾಗೂ ವಿಜ್ಞಾಪನ ಪತ್ರ ಹಾಗೂ ಕೂಪನ್ ಬಿಡುಗಡೆ

ಬೆಳ್ತಂಗಡಿ: ಮಣ್ಣಿನ ಹರಕೆಯ ಕ್ಷೇತ್ರವೆಂದೆ ಪ್ರಸಿದ್ಧವಾಗಿರುವ ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾರ್ಚ್ 4 ರಿಂದ 11ರವರೆಗೆ ನಡೆಯಲಿದ್ದು ಇದರ ಮಾಹಿತಿ ಕಚೇರಿ ಉದ್ಘಾಟನೆ, ವಿಜ್ಞಾಪನಾ ಪತ್ರ ಹಾಗೂ ಕೂಪನ್ ಬಿಡುಗಡೆ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ನಡೆಯಿತು.
ಮಾಹಿತಿ ಕಚೇರಿ ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ ಭಕ್ತರ ನಿರೀಕ್ಷೆಯಂತೆ ಕಾರ್ಯಕ್ರಮ ನೆರವೇರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಒಂದೇ ಮನಸ್ಸು, ಭಕ್ತಿ ಭಾವದಿಂದ ಪಾಲ್ಗೊಂಡು ದೇವರ ಸಾನಿಧ್ಯವೃದ್ದಿಗೆ ಸಹಕರಿಸಬೇಕು ಎಂದರು.
ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜ
ಗ್ರಾಮಸ್ಥರು ಪ್ರತಿ ಮನೆಯ ದುಡಿಮೆಯ ಒಂದು ಅಂಶವನ್ನು ದೇವರಿಗೆ ನೀಡುವ ಸಂಕಲ್ಪ ಮಾಡಬೇಕು. ಪ್ರಾಮಾಣಿಕ ಸೇವೆಯೊಂದಿಗೆ ತನು-ಮನ- ಧನದ ಸಹಕಾರವು ಅಗತ್ಯ. ಕಂಕಣಬದ್ಧರಾಗಿ ಎಲ್ಲರೂ ಸೇವೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಕೂಪನ್ ಬಿಡುಗಡೆಗೊಳಿಸಿದ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆಗೊಳ್ಳುವುದರಿಂದ ಗತವೈಭವ ಮತ್ತೆ ಮರುಕಳಿಸಲಿದೆ‌.ಪುಣ್ಯ ಕೆಲಸದಲ್ಲಿ ಜವಾಬ್ದಾರಿಯಿಂದ ತೊಡಗಿಸಿಕೊಂಡು ಊರಿನ ಸುಖ,ಸಮೃದ್ಧಿ, ಸಂತಸಕ್ಕೆ ಕಾರಣವಾಗಬೇಕು ಎಂದು ಹೇಳಿದರು.
ಮೂರನೇ ಬ್ರಹ್ಮ ಕಲಶ:
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಸತೀಶ್ ಚಂದ್ರ ಸುರ್ಯಗುತ್ತು, ಈ ಕ್ಷೇತ್ರಕ್ಕೆ ರಾಷ್ಟ್ರದಾದ್ಯಂತ ಭಕ್ತರು ಬಂದು ಇಷ್ಟಾರ್ಥಸಿದ್ಧಿಗಾಗಿ ಸೇವೆಗಳನ್ನು ಮಾಡುತ್ತಿದ್ದಾರೆ. 2013ರಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶ ಬಳಿಕ 2015ರಲ್ಲಿ ಎರಡನೇ ಬ್ರಹ್ಮಕಲಶ ನಡೆದಿತ್ತು. ಇದೀಗ ಮೂರನೇ ಬ್ರಹ್ಮ ಕಲಶ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ದೇವಸ್ಥಾನದಲ್ಲಿ ಬ್ರಹ್ಮರಥ ಇತ್ತು ಎಂದು ಪ್ರತೀತಿ ಇದೆ. ಇದೀಗ ನೂತನ ಬ್ರಹ್ಮರಥದ ಸಮರ್ಪಣೆ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ನಡೆಯಲಿದೆ ದೇವಸ್ಥಾನದ ಕಾರ್ಯಗಳಲ್ಲಿ ಪ್ರತಿಯೊಬ್ಬರ ಸಹಕಾರವು ಅತಿ ಅಗತ್ಯ ಎಂದು ಹೇಳಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯಶೋಧರ, ಸಂಗ್ರಾಮ್ ಸುಯ೯ಗುತ್ತು, ನಡಗುತ್ತು ಧನಂಜಯ ಅಜ್ರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ, ಎಕ್ಸಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮುನಿರಾಜ ಅಜ್ರಿ, ಮೋಹನ್ ಶೆಟ್ಟಿಗಾರ್, ಶಶಿ ಕಿರಣ್ ಜೈನ್, ಶ್ಯಾಮಸುಂದರ್ ನಡ ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು, ಭಕ್ತರು ಭಾಗವಹಿಸಿದ್ದರು

ಸುರ್ಯ ಕ್ಷೇತ್ರದ ಅನುವಂಶೀಯ ಆಡಳಿತ ಮೋಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ಸ್ವಾಗತಿಸಿದರು.
ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.ನಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ವಿ.ಜಿ ಧನ್ಯವಾದ ವಿತ್ತರು.

.

Related posts

ಉಜಿರೆ ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಒಕ್ಕೂಟ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ರಾಷ್ಟ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆ ಪ.ಪೂ. ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಜೂ.28: ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ-ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮೂರು ಕಡೆ ಸಮಾರಂಭ

Suddi Udaya

ಮೊಗ್ರು :ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ಬೆಳ್ತಂಗಡಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಹುಟ್ಟುಹಬ್ಬದ ಅಂಗವಾಗಿ ಶ್ರೀರಾಘವೇಂದ್ರ ಮಠದ ಸುಂದರ ಪರಿಸರದಲ್ಲಿ “ಪ್ರೇಮ ತರು” ಸಸಿಗಳನ್ನು ನೆಡುವ ಕಾರ್ಯಕ್ರಮ

Suddi Udaya
error: Content is protected !!