30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಸಂಘ-ಸಂಸ್ಥೆಗಳು

ಜೂ.28: ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ-ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮೂರು ಕಡೆ ಸಮಾರಂಭ

ಬೆಳ್ತಂಗಡಿ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಸಮಾರಂಭವನ್ನು ಜೂ. 28ರ ಆದಿತ್ಯವಾರ ಹಮ್ಮಿಕೊಳ್ಳಲಾಗಿದೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಒಟ್ಟು ಮೂರು ವಿವಿಧ ಕೇಂದ್ರಗಳಲ್ಲಿ ಈ ಕಾರ್ಯಕ್ರಮಗಳು ಜರುಗಲಿವೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳನ್ನು ಆಧರಿಸಿ ಮೂರು ಪ್ರತ್ಯೇಕ ಸಮಯ ಹಾಗೂ ಸ್ಥಳಗಳಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

1.ಪೂರ್ವಾಹ್ನ ಗಂಟೆ: 9.00 ಕ್ಕೆ ಸ್ಥಳ: ಸ್ವರಾಜ್ ಟವರ್ಸ್ ಅಳದಂಗಡಿ
(ಅಳದ೦ಗಡಿ ಮತ್ತು ನಾರಾವಿ ಜಿಲ್ಲಾ ಪ೦ಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ)

2. ಪೂರ್ವಾಹ್ನ ಗಂಟೆ: 11.00ಕ್ಕೆ
ಸ್ಥಳ: ಸಂಗಮ ಸಭಾಭವನ ಬೆಳ್ತಂಗಡಿ
(ಕಣಿಯೂರು, ಕುವೆಟ್ಟು ಜಿಲ್ಲಾ ಪ೦ಚಾಯತ್ ವ್ಯಾಪ್ತಿ ಹಾಗೂ ಬೆಳ್ತಂಗಡಿ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ)

  1. ಅಪರಾಹ್ನ ಗಂಟೆ: 2.00ಕ್ಕೆ
    ಸ್ಥಳ: ಅನುಗ್ರಹ ಸಭಾಭವನ ಉಜಿರೆ
    (ಧರ್ಮಸ್ಥಳ, ಲಾಯಿಲ, ಉಜಿರೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ)

ತಾಲೂಕಿನ ಶೈಕ್ಷಣಿಕ ಸಾಧಕರನ್ನು ಪ್ರೋತ್ಸಾಹಿಸುವ ಈ ಸನ್ಮಾನ ಸಮಾರಂಭಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಪ್ರಕಟಣೆಯಲ್ಲಿ ಆಹ್ವಾನ ನೀಡಿದ್ದಾರೆ.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಪೂಜಾರಿ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಫೆ. 28- 29: ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅಕ್ರಮ ಇಸ್ಪೀಟು ಅಡ್ಡೆಗೆ ಪೊಲೀಸ್ ದಾಳಿ: ನಗದು ಹಾಗೂ ಸೊತ್ತುಗಳ ಸಹಿತ 23 ಮಂದಿ ವಶ

Suddi Udaya

ಲಾಯಿಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಕನ್ನಾಜೆ ಆಯ್ಕೆ

Suddi Udaya
error: Content is protected !!